Ad imageAd image

ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವ,ದಾಖಲಾತಿ ಆಂದೋಲನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 88 ಮುದ್ಲಾಪುರ

Bharath Vaibhav
ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವ,ದಾಖಲಾತಿ ಆಂದೋಲನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 88 ಮುದ್ಲಾಪುರ
WhatsApp Group Join Now
Telegram Group Join Now

ಹೊಸಪೇಟೆ : -ಬಣ್ಣಗಳ ಕಲರವದಿಂದ ಕಂಗೊಳಿಸುವ ಶಾಲೆಗೆ ಸಮವಸ್ತ್ರದೊಂದಿಗೆ ಆಗಮಿಸಿದ ಮಕ್ಕಳು ಒಂದು ಕಡೆ ಆದರೆ, ಶಾಲೆಯನ್ನು ತಳಿರು – ತೋರಣದಿಂದ ಸಿಂಗರಿಸಿ ಮಕ್ಕಳನ್ನು ಪ್ರೀತಿಯಿಂದ ನೂತನ ಶೈಕ್ಷಣಿಕ ವರ್ಷಕ್ಕೆ ಬರಮಾಡಿಕೊಳ್ಳಲು ತಯಾರಿದ್ದ ಶಿಕ್ಷಕ/ಶಿಕ್ಷಕಿಯರ ಬಳಗ ಮತ್ತೊಂದು ಕಡೆ, ನಮ್ಮೊಂದಿಗೆ ಒಟ್ಟು ಗೂಡಿದವರು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಮತಿ ಲಕ್ಷ್ಮೀದೇವಿ ಯವರು. ಎಲ್ಲರೂ ಸೇರಿ ಪ್ರಭಾತ್ ಪೇರಿ ಕೈಗೊಂಡು ಶಾಲೆ ಪ್ರಾರಂಭ ಹಾಗೂ ದಾಖಲಾತಿ ಆಂದೋಲನದ ಘೋಷಣೆಗಳನ್ನು ಕೂಗುತ್ತಾ ಊರಿನ ಬೀದಿ – ಬೀದಿಗಳಲ್ಲಿ ಹೆಜ್ಜೆ ಹಾಕುತ್ತ, ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಯಿತು.

ನಂತರ ಶಾಲೆಯಲ್ಲಿ ಸೇರಿದ ನಾವು ಮಕ್ಕಳಿಗೆ ಪುಷ್ಪ, ಚಾಕಲೇಟ್ ಗಳನ್ನು ನೀಡಿ ಸ್ವಾಗತಿಸಲಾಯಿತು. ಸಮವಸ್ತ್ರವನ್ನು ಸಹ ನೀಡಲಾಯಿತು

 

ಈ ಸಂಧರ್ಭದಲ್ಲಿ SDMC ಅಧ್ಯಕ್ಷರಾದ ಶ್ರೀ ಮತಿ ಲಕ್ಷ್ಮೀದೇವಿ , ಶಾಲಾ ಪ್ರ. ಮು. ಗಳಾದ ಶ್ರೀ ಎಸ್ ರಮೇಶ, ಪ್ರಾ ಶಾ ಶಿ ಸಂ ಅಧ್ಯಕ್ಷರು ಹಾಗೂ ಶಿಕ್ಷಕರಾದ ಶ್ರೀ ಕೆ.ಬಸವರಾಜ , ಶಿಕ್ಷಕಿಯರಾದ ಶ್ರೀ ಮತಿ ರಾಧಾ ಸಿ ಎಸ್ ಮತ್ತು ಶ್ರೀ ಮತಿ ಪಾರ್ವತಿ ವಿ ಬಿ ರವರು ಉಪಸ್ಥಿತರಿದ್ದರು

ವರದಿ : ಪಿ. ಶ್ರೀನಿವಾಸ್

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!