Ad imageAd image

ಅಕ್ಷರ ಬಂಡಿಯೊಂದಿಗೆ ಅದ್ದೂರಿ ಶಾಲಾ ಪ್ರಾರಂಭೋತ್ಸವ

Bharath Vaibhav
ಅಕ್ಷರ ಬಂಡಿಯೊಂದಿಗೆ ಅದ್ದೂರಿ ಶಾಲಾ ಪ್ರಾರಂಭೋತ್ಸವ
WhatsApp Group Join Now
Telegram Group Join Now

ಇಳಕಲ್  : ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ನಂದವಾಡಗಿಯಲ್ಲಿ ೨೦೨೫-೨೬ ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ವಿಶೇಷ ದಾಖಲಾತಿ ಆಂದೋಲನವು ಮೇ ೩0 ರಂದು ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು. ಅಕ್ಷರ ಬಂಡಿ, ಘೋಷಣಾ ಫಲಕಗಳು, ಕಲಿಕಾ ಕುಂಭದೊಂದಿಗೆ ಊರಿನಲ್ಲಿ ಸಂಚರಿಸಿ ಕರಪತ್ರವನ್ನು ನೀಡಿ ಸರಕಾರಿ ಶಾಲೆಯ ಸೌಲಭ್ಯ, ಮಹತ್ವ ಪಾಲಕರಿಗೆ ಮನವರಿಕೆ ಮಾಡಲಾಯಿತು.

ಕ್ಷರ ಬಂಡಿಯೊಂದಿಗೆ ಶಿಕ್ಷಕರು, ವಿದ್ಯಾರ್ಥಿನಿಯರು, ಎಸ್ ಡಿ ಎಂ ಸಿ ಸರ್ವ ಸದಸ್ಯರು, ಶಿಕ್ಷಣ ಪ್ರೇಮಿಗಳು ಸಾಗಿ ಮಕ್ಕಳನ್ನು ಶಾಲೆಗೆ ಕರೆ ತರಲಾಯಿತು. ಗ್ರಾಮ ಪಂಚಾಯತ ಅಧ್ಯಕ್ಷರು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಸದಸ್ಯರು, ಅಧಿಕಾರ ವೃಂದ ವಿಶೇಷ ಜಾಥಾದಲ್ಲಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಮುದ್ದು ಮಕ್ಕಳಿಗೆ ಶಿಕ್ಷಕರು ಹೂ ಗುಚ್ಛ ನೀಡಿ, ಸಿಹಿ ನೀಡಿ ಸ್ವಾಗತಿಸಿದರು.

ಪ್ರಾರಂಭ ದಿನವೇ ಮಕ್ಕಳಿಗೆ ಪಠ್ಯ ಪುಸ್ತಕ ನೀಡಲಾಯಿತು. ಹೆಚ್ಚು ವಿದ್ಯಾರ್ಥಿನಿಯರು ದಾಖಲಾತಿ ಪಡೆದು ಶಾಲೆಗೆ ಹಾಜರಾದರು. ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ಜಯಶ್ರೀ ವಗ್ಗರ, ಉಪಾಧ್ಯಕ್ಷರು ಸುಭಾಸಗೌಡ ರಾಯನಗೌಡ್ರು, ನಂದಿನಿ ಗೌಡರ, ರಾಜಶೇಖರ ಕಂಠಿ, ವೀರಭದ್ರಯ್ಯ ಮಠ, ಮಾಬುಸಾಬ ಮುಜಾವರ, ಶಿವಪ್ಪ ಕಟಾಂಬ್ಳಿ, ಬಸವರಾಜ ಮಲ್ಲನಗೌಡ್ರು, ಶರಣಪ್ಪ ವಗ್ಗರ, ಶಾಲಾ ಮುಖ್ಯ ಗುರುಮಾತೆ ವಿ ಬಿ ಕುಂಬಾರ, ಜ್ಯೋತಿ, ಜಿ ಆರ್ ನದಾಫ್, ಎಸ್ ಬಿ ಮಲಗಿಹಾಳ, ಡಾ ವಿಶ್ವನಾಥ ತೋಟಿ, ಬಸವರಾಜ ಬಲಕುಂದಿ, ಚಂದ್ರಶೇಖರ ಹುತಗಣ್ಣ, ಅಶ್ವಿನಿ ಕಪ್ಪರದ, ಗಂಗಾ ಗುರುಮಾತೆ, ವಿದ್ಯಾರ್ಥಿನಿಯರು, ಬಿಸಿಯೂಟ ಸಿಬ್ಬಂದಿ, ಊರಿನ ಯುವಕರು, ಶಿಕ್ಷಣ ಪ್ರೇಮಿಗಳು ಭಾಗವಹಿಸಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!