ಸಿಂಧನೂರು : ಮೇ 9 ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಕ್ರಾಂತಿಕಾರಿ ರಥಯಾತ್ರೆ ಜಾಗೃತಿ ಸಮಾವೇಶ ಇಡೀ ರಾಜ್ಯದ್ಯಂತ ಸಂಚರಿಸುತ್ತ ಮೇ 9. 2025 ರಂದು ಸಾಯಂಕಾಲ 5:30 ಸುಮಾರಿಗೆ ಸಿಂಧನೂರು ನಗರಕ್ಕೆ ಆಗಮಿಸಿದ್ದು ಮಾದಿಗ ಸಮುದಾಯದ ಬಂಧುಗಳು ಕ್ರಾಂತಿಕಾರಿ ರಥಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡು ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ್ ರ‍್ಯಾಲಿಯ ಮುಖಾಂತರ ಭೀಮ ಬಂಧುಗಳು ಜೈ ಭೀಮ್ ಜೈ ಮಾದಿಗ ಎಂಬ ಘೋಷಣೆ ಕೂಗುತ್ತಾ ನಗರದ ಸುಖಲಪೇಟೆಯ ಅಂಬೇಡ್ಕರ್ ಕಲ್ಯಾಣ ಮಂಟಪಕ್ಕೆ ಒಳ ಮೀಸಲಾತಿ ಕ್ರಾಂತಿಕಾರಿ ಯಾತ್ರೆಯನ್ನು ಅಂಬೇಡ್ಕರ್ ಯುವಕ ಮಂಡಳಿ ಮತ್ತು ಅಂಬೇಡ್ಕರ್ ಸೇವಾ ಸಮಿತಿ ಟ್ರಸ್ಟ್ ಹಾಗೂ ನಗರದ ಮಾದಿಗ ಸಮುದಾಯದವರಿಂದ ಕ್ರಾಂತಿಕಾರಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯ ಪ್ರಮುಖ ರೂವಾರಿ ಭಾಸ್ಕರ್ ಪ್ರಸಾದ್. ಅಲ್ಲಮಪ್ರಭು ಪೂಜಾರಿ. ಹನುಮಂತಪ್ಪ ಪನ್ನೂರು ಆರ್. ಅಂಬ್ರುಸ್. ಜಗದೀಶ್ ವಕೀಲರು. ಹುಸೇನಪ್ಪ ಬಾಲಿ. ಯಮನಪ್ಪ ಬಿಎಸ್ಎನ್ಎಲ್. ಅಮರೇಶ್ ಗಿರಿಜಾಲಿ. ದುರ್ಗೇಶ್ ಬಾಲಿ. ಹನುಮಂತ ಕರ್ನಿ. ನಿರುಪಾದಿ ನಾಗಲಾಪುರ. ಹಸೇನಪ್ಪ ಸೂಲಂಗಿ. ಹನುಮಂತ ಹಂಪನಾಳ. ಗವಿಸಿದ್ದಪ್ಪ ಕೊಳಬಾಳ. ಇನ್ನು ಅನೇಕರಿದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ.




