Ad imageAd image
- Advertisement -  - Advertisement -  - Advertisement - 

ವಿಶ್ವಕರ್ಮ ಸಮಾಜದಿಂದ ಅದ್ದೂರಿ ಯಜುರ್ ಉಪಾಕರ್ಮ ಮಹೋತ್ಸವ

Bharath Vaibhav
ವಿಶ್ವಕರ್ಮ ಸಮಾಜದಿಂದ ಅದ್ದೂರಿ ಯಜುರ್ ಉಪಾಕರ್ಮ ಮಹೋತ್ಸವ
WhatsApp Group Join Now
Telegram Group Join Now

ತುರುವೇಕೆರೆ: –ತಾಲ್ಲೂಕು ವಿಶ್ವಕರ್ಮ ಸಮಾಜ, ಶ್ರೀ ಕಾಳಿಕಾಂಬ ದೇವಾಲಯ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ಅದ್ದೂರಿ ಶ್ರೀ ವಿಶ್ವಕರ್ಮ ಯಜುರ್ ಉಪಾಕರ್ಮ ಮಹೋತ್ಸವವನ್ನು ಆಚರಿಸಲಾಯಿತು.

ಆಗಸ್ಟ್ 19 ರಂದು ಸೋಮವಾರ ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಸುಬ್ರಮಣ್ಯನಗರದಲ್ಲಿರುವ ಸಿಹಿನೀರು ಬಾವಿಯ ಬಳಿ ಗಂಗಾಪೂಜೆ ನೆರವೇರಿಸಿ, ಕಳಸ ಹೊತ್ತ ಮಹಿಳೆಯರೊಂದಿಗೆ ಶ್ರೀ ಕಾಳಿಕಾಂಬ ಅಮ್ಮನವವರ ಉತ್ಸವ ನಡೆಸಲಾಯಿತು. ಶ್ರೀ ವಿಶ್ವಕರ್ಮ ಶ್ರೀ ಕಾಳಿಕಾಂಭ ಸುಪ್ರಭಾತ, ಗಂಗಾವತರಣ ಆಹ್ವಾನ, ಅಮ್ಮನವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಪುಣ್ಯಾಹವಾಚನ, ಗಣಪತಿ ಪೂಜೆ, ದೇವನಾಂದಿ ನವಗ್ರಹ ಆರಾಧನೆ, ಋಷಿ ಆರಾಧನೆ, ನವಗ್ರಹ ಹೋಮ, ಗಣಪತಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ಹೋಮಹವನಾದಿಗಳನ್ನು ನೆರವೇರಿಸಿ ನಂತರ ಯಜ್ಞೋಪವೀತ ಧಾರಣೆ ಮಾಡಲಾಯಿತು. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

ವಿಶ್ವಕರ್ಮ ಯಜುರ್ ಉಪಾಕರ್ಮ ಮಹೋತ್ಸವದ ಕುರಿತು ಮಾತನಾಡಿದ ವಿಶ್ವಕರ್ಮ ಸಮಾಜದ ಅಧ್ಯಕ್ಷ ಟಿ.ಎನ್.ಅರುಣ್, ಪ್ರತಿ ವರ್ಷದಂತೆ ಈ ಈ ವರ್ಷವೂ ವಿಶ್ವಕರ್ಮ ಯಜುರ್ ಉಪಾಕರ್ಮ ಮಹೋತ್ಸವವನ್ನು ಆಯೋಜಿಸಲಾಗಿದೆ. ಸಮಾಜದ ಹಿರಿಯರು ಹಿಂದಿನಿಂದ ನಡೆಸಿಕೊಂಡು ಪದ್ದತಿ, ಸಂಪ್ರದಾಯವನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.

ಶ್ರೀ ಕಾಳಿಕಾಂಬ ಮಾತೆಯ ಆರ್ಶೀವಾದದೊಂದಿಗೆ ಉಪಾಕರ್ಮ ಮಹೋತ್ಸವ ನಿರ್ವಿಘ್ನವಾಗಿ ನೆರವೇರಿದ್ದು, ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ, ವಿಶ್ವಕರ್ಮ ಸಮುದಾಯದ ಬಾಂದವರೊಂದಿಗೆ ಶ್ರೀ ಕಾಳಿಕಾಂಬ ದೇವಿ ಹಾಗೂ ಶ್ರೀ ವಿರಾಟ ವಿಶ್ವಕರ್ಮ ದೇವರ ಉತ್ಸವವನ್ನು ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ದೇವರಾಜ್, ಉಪಾಧ್ಯಕ್ಷರಾದ ಪ್ರೇಮ್ ಕುಮಾರ್, ನಾಗರಾಜಾಚಾರ್, ಪ್ರಧಾನ ಕಾರ್ಯದರ್ಶಿ ಸತೀಶ್, ಖಜಾಂಚಿ ಸೀನಾಚಾರ್, ಸಹಕಾರ್ಯದರ್ಶಿ ನಂದೀಶ್, ಸಂಘಟನಾ ಕಾರ್ಯದರ್ಶಿ ಗೌತಮ್, ರಂಗಾಚಾರ್, ಅಶೋಕ್, ನಿರ್ದೇಶಕರಾದ ಬಸವರಾಜು, ಚಂದ್ರು, ಮೋಹನ್, ಲಿಂಗಾಚಾರ್ ಸೇರಿದಂತೆ ವಿಶ್ವಕರ್ಮ ಬಾಂದವರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
Share This Article
error: Content is protected !!