ಬಾಗೇಪಲ್ಲಿ:ಯುವ ವಕೀಲರಿಗೆ ವಾಕ್ಚಾತುರ್ಯ ಚೆನ್ನಾಗಿರಬೇಕು ವಾಕ್ಚಾತುರ್ಯ ಚೆನ್ನಾಗಿದ್ದಾಗ ಮಾತಿನಿಂದ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ವಕೀಲರ ಸಂಬಂಧ ಉತ್ತಮವಾಗುತ್ತದೆ ಅಲ್ಲದೆ ಮಾತಿನಿಂದ ತಮ್ಮ ಕುಟುಂಬ ತಮ್ಮ ಬದುಕನ್ನ ಉತ್ತಮವಾಗಿ ರೂಪಿಸಿಕೊಳ್ಳಬಹುದು
ಎಂದು ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶೆ ಭಾರತಿ ಎo ಅಭಿಪ್ರಾಯಪಟ್ಟರು.ವಕೀಲರ ಸಂಘದಿಂದ ಪಟ್ಟಣದ ದ್ವಾರಕ ಪಾರ್ಟಿ ಹಾಲ್‌ನಲ್ಲಿ ಆಯೋಜಿಸಿದ್ದ ವಕೀಲರ ದಿನಾಚರಣೆಯಲ್ಲಿ ಮಾತನಾಡಿ,
ಯುವ ವಕೀಲರು ಎಲ್ಲಂದರೆ ಅಲ್ಲಿ ಹೆಂಗೆ ಬೇಕಾದರೂ ಹಂಗೆ ಮಾತನಾಡಬಾರದು ತಮ್ಮ ಮಾತನ್ನು ಮತ್ತು ವಾಕ್ಚಾತುರ್ಯವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಯುವ ವಕೀಲರು ನ್ಯಾಯಾಲಯದ ಮುಂದು ಗಡೆ ಪ್ರತಿದಿನ ಕೇಸುಗಳ ಬಗ್ಗೆ ಕೇಸಿನ ವಿಚಾರ ಟೈಮ್ ಅನ್ನು ಪಡೆಯುವುದು ಸಮಂಜಸವಲ್ಲ ಸಣ್ಣಪುಟ್ಟ ಪ್ರಕರಣಗಳಲ್ಲಿ ವಾದಿಸುವಂತಹ ಗುಣವನ್ನು ಬೆಳೆಸಿಕೊಳ್ಳಬೇಕು ಇಲ್ಲವಾದಲ್ಲಿ ತಮ್ಮ ಉತ್ತಮವಾದಂತಹ ಯಶಸ್ವಿ ವಕೀಲರು ಆಗಲು ಸಾಧ್ಯವಿಲ್ಲ.
ಅವರು ಪ್ರತಿ ದಿನ ಹಿರಿಯವಕೀಲರ ಮಾರ್ಗದರ್ಶನದಲ್ಲಿ ಅವರ ನೇತೃತ್ವದಲ್ಲಿ ದಾವೆಗಳನ್ನ ಸಿವಿಲ್ ವ್ಯಾಜ್ಯಗಳನ್ನ ಯಾವ ರೀತಿ ನಡೆಸಬೇಕು ಎಂಬುದನ್ನ ಚರ್ಚೆ ನಡೆಸಿ ಯಶಸ್ವಿ ವಕೀಲರಾಗಬೇಕು ಎಂದರು.
ಬದುಕಿನಲ್ಲಿ ಲಕ್ಷ್ಮೀ ಲಾಟರಿಯಲ್ಲಿ ಒಲಿಯಬಹುದು,ಆದರೆ ಸರಸ್ವತಿನ್ನು ಕಠಿಣ ಶ್ರಮ, ನಿರಂತರ ಅಭ್ಯಾಸ ಮತ್ತು ಪ್ರಯತ್ನದಿಂದ ಮಾತ್ರ ಒಲಿಸಿಕೊಳ್ಳಲು ಸಾಧ್ಯ.ಹಿಂದೆ ಆಸ್ತಿ ಇದ್ದವರು ಮಾತ್ರ ಶ್ರೀಮಂತರಾಗಿದ್ದರು.
ಆದರೆ ಪ್ರಸ್ತುತ ವಿದ್ಯೆ ಇದ್ದವರು ಸಮಾಜದಲ್ಲಿ ಶ್ರೀಮಂತರಾಗಿದ್ದಾರೆ.
ಸಮಾಜದಲ್ಲಿ ವಕೀಲರ ವೃತ್ತಿ ಪ್ರಮುಖ ಪಾತ್ರವಹಿಸಲಿದೆ. ಜವಾಬ್ದಾರಿಯುತ ವೃತ್ತಿಯಲ್ಲಿರುವ ವಕೀಲರು ತಮ್ಮನ್ನು ನಂಬಿ ಬಂದ ಕಕ್ಷೀದಾರರಿಗೆ ನ್ಯಾಯ ಕೊಡಿಸುವ ಹಾಗೂ ಸಂವಿಧಾನದ ಆಶಯಗಳನ್ನು ಹೆಚ್ಚಾಗಿ ಪರಿಚಯ ಮಾಡುವ ವ್ಯಕ್ತಿಯೇ ನಿಜವಾದ ವಕೀಲ ಎಂದರು.
ವಕೀಲರ ವೃತ್ತಿ ಎಂಬುದು ಕೇವಲ ವೃತ್ತಿಯಲ್ಲ ಅದು ಸಾಮಾಜಿಕ ಜವಾಬ್ದಾರಿ.ಸತತ ಓದಿನ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ನಿರ್ಭಯವಾಗಿ ವಾದ ಮಂಡಿಸಬೇಕು.ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ
ಇದ್ದ ಬಹುತೇಕ ಗಣ್ಯರು ವಕೀಲರು ಎಂಬುದು ಹೆಮ್ಮೆಯ ವಿಚಾರ. ಸಮಾಜದಲ್ಲಿ ವಕೀಲರು ಮಾದರಿಯಾಗಿರಬೇಕೆಂದರು.
ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಧೀಶ ಮಂಜುನಾಥಚಾರಿ ಮಾತನಾಡಿ, ಉತ್ತಮ ಸಮಾಜ ನಿರ್ಮಿಸಲು, ಸಮಾಜವನ್ನು ಉಳಿಸಿಕೊಳ್ಳಲು ಅನುಭವ ಮಂಟಪಗಳಲ್ಲಿ ಚರ್ಚೆ ಮಾಡಬೇಕಾದ ಅಗತ್ಯವಿದೆ. ಹಿರಿಯರ ಮಾರ್ಗದರ್ಶನ ಕಿರಿಯ ವಕೀಲರಿಗೆ ಅಗತ್ಯವಿದೆ. ವಕೀಲ ವೃತ್ತಿಯಲ್ಲಿ ಅಡ್ಡದಾರಿಯಲ್ಲಿ ಹಣ ಮಾಡಬಹುದು. ಚೆನ್ನಾಗಿರಬಹುದು ಎನ್ನುವುದಾದರೆ ನೀವು ಹಣ ಮಾತ್ರ ಮಾಡಬಹುದು ಆದರೆ ನಿಮ್ಮ ಅಸ್ಥಿತ್ವವನ್ನು ಸಮಾಜದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾ ಯಿತು. ಹಿರಿಯ ವಕೀಲರನ್ನು ಸನ್ಮಾನಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಜಯಪ್ಪ, ಹಿರಿಯ ವಕೀಲರಾದ ಎ.ಜಿ.ಸುಧಾಕರ್, ಕರುಣಾಸಾಗರರೆಡ್ಡಿ, ಜೆ.ಎನ್.ನಂಜಪ್ಪ, ಅಲ್ಲಾಭಕಾಶ್, ಸತ್ಯನಾರಾಯಣ ರಾವ್, ವೈ.ಶ್ರೀನಿವಾಸರೆಡ್ಡಿ, ಎಸ್.ನರಸಿಂಹರೆಡ್ಡಿ, ಫಯಾಜ್, ಬಿ.ಆರ್.ನರಸಿಂಹನಾಯ್ಡು, ಆರ್.ಚಂದ್ರಶೇಖರ್, ಎಂಬಿ ಗುರುನಾಥ್, ವಿ ನಾರಾಯಣ, ಮುಸ್ತಾಕ್ ಅಹಮದ್, ಎ ನಂಜುಂಡಪ್ಪ, ಚಂದ್ ಬಾಷಾ, ಡಿಎಲ್ ರಾಮಾಂಜನೇಯ, ಸಿವಿ ನರೇಂದ್ರಬಾಬು, ಜಿಎಸ್ ರಾಮಾಂಜಿ,ಎಎಂ ನವೀನ್ ಕುಮಾರ್ ,ನಾಗಭೂಷಣ, ಬಾಲು ನಾಯ್ಕ, ಡಿವಿ ಸತೀಶ್, ರವನ, ಸುಧಾಕರ್, ಮಲ್ಲಿಕಾರ್ಜುನ, ಲಕ್ಷ್ಮಣರೆಡ್ಡಿ, ಉಮೇಶ್, ಅನಿಲ್ ಕುಮಾರ್, ಆನಂದ್, ಶ್ರೀನಾಥ್ ಶ್ರೀನಿವಾಸ್, ರಾಮಾಂಜಿ, ತಿರುಮಲೇಶ, ಹರೀಶ, ಖಲೀಮ್,ಇದ್ದರು.
ವರದಿ :ಯಾರಬ್. ಎಂ.




