ಸಿಂಧನೂರು : ಮೇ 9 ನಗರದ ಗಂಗಾವತಿ ರಸ್ತೆ ಸಿಂಡಿಕೇಟ್ ಬ್ಯಾಂಕ್ ಮುಂದೆ ಮಹಾರಾಷ್ಟ್ರ ಮೂಲದ ಲಾರಿ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲಿ ಸಾವನಪ್ಪಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು ಈ ಅಪಘಾತ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪಘಾತಳಕ್ಕೆ ನಗರದ ಡಿ ವೈ ಎಸ್ ಪಿ. ಬಿ ಎಸ್. ತಳವಾರ್ ಬೇಟೆ ನೀಡಿದರು.
ತಾಲೂಕಿನ ಅಮರಾಪುರ ಗ್ರಾಮದಲ್ಲಿ ಗೃಹಪ್ರವೇಶಕ್ಕೆ ಕೋಳುಬಾಳ ಗ್ರಾಮದಿಂದ ಮೃತಾಳ ಅಳಿಯ ಮಹೇಶ್ ಬೈಕ್ ನಲ್ಲಿ ಅತ್ತೆಯನ್ನು ಕರೆದುಕೊಂಡು ಹೋಗುತ್ತಿರುವಾಗ ಈ ಅಪಘಾತ ಸಂಭವಿಸಿದೆ ಕೋಳಬಾಳ ಗ್ರಾಮದ ಭಾಗಮ್ಮ ಗಂಡ ನಾಗಲಿಂಗಪ್ಪ 50 ಎಂದು ಗುರುತಿಸಲಾಗಿದ್ದು ಲಾರಿ ಚಾಲಕ ಘಟನೆ ಸಂಭವಿಸ್ತಿದಂತೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ವರದಿ : ಬಸವರಾಜ ಬುಕ್ಕನಹಟ್ಟಿ.




