ಹಾವೇರಿ :ಚಾಲಕನ ನಿಯಂತ್ರಣ ತಪ್ಪಿ ತರಕಾರಿ ತುಂಬಿದ ಲಾರಿ ಪಲ್ಟಿ.ಹತ್ತು ಜನರು ಸ್ಥಳದಲ್ಲಿಯೇ ಸಾವು
ಹೌದು ಈ ಘಟನೆ ಯಲ್ಲಾಪುರ ಮತ್ತು ಅಂಕೋಲಾ ರಸ್ತೆ ಮದ್ಯ ಸಂಭವಿಸಿದ್ದು ಸ್ಥಳದಲ್ಲಿಯೇ ಹತ್ತು ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಹತ್ತು ಜನರು ಹಾವೇರಿ ಜಿಲ್ಲೆಯ ಸವಣೂರುನಿಂದ ತರಕಾರಿ ತಗೆದುಕೊಂಡು ಅಂಕೋಲಾ ಸಂತೆಗೆ ಹೋಗುತ್ತಿದ್ದರೆಂದು ಹೇಳಲಾಗಿದೆ. ಮೃತಪಟ್ಟ ಎಲ್ಲರೂ ಸವಣೂರಿನ ನಿವಾಸಿಗಳಾಗಿದ್ದು ಕುಟುಂಬಸ್ಥರ ಆಕ್ರೋಶ ಹೇಳತೀರದಾಗಿದೆ.

ಎಲ್ಲ ಮೃತ ದೇಹವನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಗೆ ಶಿಗ್ಗಾಂವಿ ನೂತನ ಶಾಸಕರಾಗಿರುವ ಯಾಸಿರ್ ಅಹಮದ್ ಖಾನ್ ಪಠಾಣ್ ಬೇಟಿ ಮಾಡಿದ್ದರು ಎನ್ನಲಾಗಿದೆ
ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ಪರಿಹಾರ ನೀಡುವುದಾಗಿ ಹೇಳಿದ್ದಾರೆ.
ವರದಿ: ರಮೇಶ್ ತಾಳಿಕೋಟಿ




