Ad imageAd image

ತ್ರಿಕೋನ ಪ್ರೇಮ ಪ್ರಕರಣ : ರೂಮ್ ಮೇಟ್ ನೇ ಬರ್ಬರವಾಗಿ ಹತ್ಯೆಗೈದ ಸ್ನೇಹಿತ

Bharath Vaibhav
ತ್ರಿಕೋನ ಪ್ರೇಮ ಪ್ರಕರಣ : ರೂಮ್ ಮೇಟ್ ನೇ ಬರ್ಬರವಾಗಿ ಹತ್ಯೆಗೈದ ಸ್ನೇಹಿತ
WhatsApp Group Join Now
Telegram Group Join Now

ಬೆಂಗಳೂರು : ಒಂದೇ ಕೊಠಡಿಯಲ್ಲಿ ವಾಸವಿದ್ದ ಇಬ್ಬರು ಸ್ನೇಹಿತರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು.. ಇದರಿಂದಾಗಿ ಇಬ್ಬರ ನಡುವೆ ವೈಮನಸ್ಯ ಉಂಟಾಗಿದ್ದು, ಹುಟ್ಟುಹಬ್ಬದ ದಿನಗಳೇ ಯುವಕನೊಬ್ಬ ತನ್ನ ಸ್ನೇಹಿತನನ್ನು ಕೊಲೆ ಮಾಡಿದ್ದಾನೆ.. ಇಟ್ಟಿಗೆಯಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಸಂಜಯ್‌ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಗೆದ್ದಲಹಳ್ಳಿಯಲ್ಲಿ ಈ ಘಟನೆ ನಡೆದಿದೆ..

ವರುಣ್‌ ಕೋಟ್ಯಾನ್‌ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಆತನ ರೂಮ್‌ಮೇಟ್‌ ದಿವೇಶ್‌ ಎಂಬಾತನೇ ಕೊಲೆಗಾರನಾಗಿದ್ದಾನೆ.

ಇಬ್ಬರೂ ಸ್ನೇಹಿತರಾಗಿದ್ದು, ಒಂದೇ ಕೊಠಡಿಯಲ್ಲಿ ವಾಸವಿದ್ದರು.. ವರುಣ್‌ ಕೋಟ್ಯಾನ್‌ ಬಾಗಲೂರಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ.. ಆರೋಪಿ ದಿವೇಶ್‌ ಖಾಸಗಿ ಕಂಪನಿಯೊಂದರ ಉದ್ಯೋಗಿ ಎಂದು ತಿಳಿದುಬಂದಿದೆ.

ಇಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು.ಈ ವಿಷಯ ತಿಳಿದ ದಿವೇಶ್‌, ವರುಣ್‌ ಕೋಟ್ಯಾನ್‌ನನ್ನು ಕೊಲೆ ಮಾಡಿದ್ದಾನೆ ಎಂದು ಗೊತ್ತಾಗಿದೆ.ಶುಕ್ರವಾರ ಇಬ್ಬರು ಸ್ನೇಹಿತರು ಇವರ ಕೊಠಡಿಗೆ ಬಂದಿದ್ದರು.. ನಾಲ್ವರೂ ಪಾರ್ಟಿ ಮಾಡಲೆಂದು ಕೋರಮಂಗಲಕ್ಕೆ ತೆರಳಿದ್ದರು.

ಬೆಳಗಿನ ನಾಲ್ವರೂ ಎರಡು ಬೈಕ್‌ಗಳಲ್ಲಿ ದೇವನಹಳ್ಳಿ ಕಡೆಗೆ ಜಾಲಿ ರೈಡ್‌ಗೆ ಹೋಗಿ ನಂತರ ಕೊಠಡಿಗೆ ವಾಪಸ್ಸಾಗಿದ್ದಾರೆ.. ಇಬ್ಬರು ಸ್ನೇಹಿತರಲ್ಲಿ ಒಬ್ಬ ಮನೆಗೆ ಹೋದರೆ, ಮತ್ತೊಬ್ಬ ಕೋಟ್ಯಾನ್‌ ಕೊಠಡಿಯಲ್ಲಿ ಮಲಗಿದ್ದ. ವರುಣ್ ಮತ್ತು ದಿವೇಶ್ ತಮ್ಮ ಮನೆಯ ಹೊರಗೆ ಕುಳಿತಿದ್ದರು. ಅಲ್ಲಿ ಹುಡುಗಿ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.. ಈ ವೇಳೆ ಜಗಳ ತಾರಕಕ್ಕೇರಿ ಈ ಕೊಲೆ ಮಾಡಲಾಗಿದೆ..

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!