ಚಿಂಚೋಳಿ : ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಹುಚ್ಚು ನಾಯಿ ಕಡಿತದಂದ ಜನರು ತತ್ತರಿಸಿದ್ದಾರೆ ಸುಮಾರು 10 ಜನ ಕಿಂತ ಹೆಚ್ಚು ಜನರಿಗೆ ಮನ ಬಂದಂತೆ ಕಚ್ಚಿ ತೀವ್ರ ಗಾಯಗೊಳಿಸಿದ ಘಟನೆ ನಡೆದಿದೆ.
ಗ್ರಾಮದ ಬಸವೇಶ್ವರ ವೃತ ಹಾಗೂ ಮುಖ್ಯ ರಸ್ತೆಯಲ್ಲಿ ಬೈಕ ಮೇಲೆ ಹೊಗುತ್ತಿರುವ ವಾಹನ ಸಾವರರಿಗೆ ಬೆನ್ನು ಹತ್ತಿ ಕಚ್ಚಿದೆ ಕೆಲವರ ಕಾಲು ಹಿಡಿದು ಕಚ್ಚಿವೆ, ಕೆಲವರ ಮೈ ಮೇಲೆ ಎರಗಿ ಕಚ್ಚಿವೆ. ಹುಚ್ಚುನಾಯಿ ಕಡಿತದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದಿದ್ದಾರೆ.
ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ ಜಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ಸೋಮಸಿಂಗ್ ರಾಠೋಡ ತಿಳಿಸಿದ್ದಾರೆ.ನಾಯಿಯಿಂದ ಕಚ್ಚಿಸಿಕೊಂಡು ಗಾಯಗೊಂಡಿದ್ದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ರೇಬಿಸ್ ರೋಗ ನಿರೋಧಕ ಲಸಿಕೆ ಹಾಕಿ ಚಿಕಿತ್ಸೆ ನೀಡಿದರು.ಆದರೆ ನಾಯಿಗಳು ಸದ್ಯ ಎಲ್ಲಿವೆ ಎಂಬುದು ಗೊತ್ತಾಗಿಲ್ಲ.
ಅವು ಇತರೆ ನಾಯಿಗಳಿಗೆ, ಜನರಿಗೆ ಮತ್ತು ಪ್ರಾಣಿಗಳಿಗೆ ಕಚ್ಚದಂತೆ ನೋಡಿಕೊಳ್ಳಬೇಕು ಇತರ ನಾಯಿಗಳಿಗೆ ಕಚ್ಚಿದರೆ ಇನ್ನಷ್ಟು ಅನಾಹುತ ಆಗುವ ಸಾಧ್ಯತೆ ಇರುತ್ತದೆ ಅದಕ್ಕಾಗಿ ಮುಂಜಾಗ್ರತೆಯಿಂದ ಹುಚ್ಚು ನಾಯಿಗೆ ಬೆಲೆ ಬೀಸಿ ಹಿಡಿಯುವಂತ ಪ್ರಯತ್ನ ಗ್ರಾಮ ಪಂಚಾಯತಿ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ : ಸುನಿಲ್ ಸಲಗರ




