ನೇಪಿಡಾವ್: ಮ್ಯಾನ್ಮಾರ್ನಲ್ಲಿ ಭಾನುವಾರ 3.2 ತೀವ್ರತೆಯ ಭೂಕಂಪ ಸಂಭವಿಸಿವೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ (NCS) ತಿಳಿಸಿದೆ.
ವರದಿಗಳ ಪ್ರಕಾರ ಮ್ಯಾನ್ಮಾರ್‌ನಲ್ಲಿ ಸರಣಿ ಭೂಕಂಪಗಳು ಸಂಭವಿಸಿದ್ದು, ಮೊದಲ ಭೂಕಂಪವು 80 ಕಿಲೋಮೀಟರ್ ಆಳದಲ್ಲಿ ಭಾರತೀಯ ಕಾಲಮಾನ ಮಾಧ್ಯರಾತ್ರಿ 12:26 ಕ್ಕೆ ಸಂಭವಿಸಿದೆ.
ನಂತರ 12:52 ಕ್ಕೆ 25 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ. ಸದ್ಯ ಇಲ್ಲಿಯವರೆಗೆ ಯಾವುದೇ ಸಾವು ನೋವು ಅಥವಾ ಹಾನಿಗಳ ವರದಿಯಾಗಿಲ್ಲ.
ಇದಕ್ಕೂ ಮುನ್ನ ಶುಕ್ರವಾರ ಮ್ಯಾನ್ಮಾರ್ನಲ್ಲಿ 35 ಕಿ.ಮೀ ಆಳದಲ್ಲಿ 2.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಎನ್‌ಸಿಎಸ್, ಅಕ್ಷಾಂಶ: 23.91 ಎನ್, ಉದ್ದ: 93.85 ಪೂರ್ವ, ಆಳ: 35 ಕಿ.ಮೀ, ಸ್ಥಳ: ಮ್ಯಾನ್ಮಾರ್ ಎಂದು ಹೇಳಿದೆ.




