ಬೆಳಗಾವಿ : ರಾಜ್ಯದಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಯ ಬಳಿಕ ಹೆಂಡತಿ ಕಾಟಕ್ಕೆ ಬೇಸತ್ತು ಅದೆಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಬೆಳಕಿಗೆ ಬಂದಿದೆ.
ಇದೀಗ ಬೆಳಗಾವಿಯ ಅನಗೋಳದ ದುರ್ಗಾ ಕಾಲೋನಿಯಲ್ಲಿ ಕೂಡ ಇಂತಹದ್ದೇ ಒಂದು ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯನ್ನು ಅನಗೋಳದ ಶ್ರೀರಾಮ ಕಾಲನಿ ನಿವಾಸಿ ಸುನಿಲ್ ಮೂಲಿಮನಿ (33) ಎಂದು ಗುರುತಿಸಲಾಗಿದೆ.
ಕಳೆದ ನಾಲ್ಕು ವರ್ಷದ ಹಿಂದೆ ಪೂಜಾ ಎಂಬುವವರನ್ನು ಸುನೀಲ್ ಮದುವೆಯಾಗಿದ್ದರು. ಅಲ್ಲದೇ ಈ ದಂಪತಿಗಳಿಗೆ ಮೂರು ವರ್ಷದ ಮಗು ಕೂಡ ಇತ್ತು.
ಪತ್ನಿ- ಪುತ್ರಿ ಜೊತೆಗೆ ಪ್ರತ್ಯೇಕವಾಗಿ ವಾಸವಿದ್ದ ಸುನೀಲ ಶಿವಶಕ್ತಿ ನಗರದ ಬಾಡಿಗೆ ಅಂಗಡಿ ಪಡೆದು ಕಂಪ್ಯೂಟರ್ ರಿಪೇರಿ ಕೆಲಸ ಮಾಡುತ್ತಿದ್ದ. ಪತ್ನಿಯಿಂದ ದೂರವಿದ್ದರು ಕೂಡ ಆಗಾಗ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು.
ಇವೆಲ್ಲದರಿಂದ ಬೇಸತ್ತ ಸುನೀಲ ತನ್ನ ಅಂಗಡಿಯಲ್ಲೇ ವೈರ್‌ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಸ್ಥಳಕ್ಕೆ ಬೆಳಗಾವಿಯ ಉದ್ಯಮಭಾಗ ಠಾಣೆಯಲ್ಲಿ ಪತ್ನಿ ಪೂಜಾ ವಿರುದ್ಧ ದೂರು ದಾಖಲಾಗಿದ್ದು, ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಹೆಂಡತಿ ಕಾರಣ ಅಂತಾ ಡೆತ್ ನೋಟ್ ಬರೆದಿಟ್ಟಿದ್ದಾನೆ.




