Ad imageAd image

ನಾಲ್ಕರು ಮಕ್ಕಳನ್ನು ಕುತ್ತಿಗೆ ಸೀಳಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

Bharath Vaibhav
ನಾಲ್ಕರು ಮಕ್ಕಳನ್ನು ಕುತ್ತಿಗೆ ಸೀಳಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
WhatsApp Group Join Now
Telegram Group Join Now

ಶಹಜಹಾನ್ಪುರ (ಉತ್ತರ ಪ್ರದೇಶ): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೊಬ್ಬ ತನ್ನ ನಾಲ್ವರು ಮಕ್ಕಳ ಕುತ್ತಿಗೆ ಸೀಳಿ ಕೊಂದು, ಬಳಿಕ ತಾನೂ ಸಾವಿಗೆ ಶರಣಾದ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಬುಧವಾರ ರಾತ್ರಿ ನಡೆದಿದೆ. ಗುರುವಾರ ಬೆಳಗ್ಗೆ ಅಕ್ಕ – ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು.

ಶಹಜಹಾನ್‌ಪುರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಮನ್ಪುರ್ ಚಾಚ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಜೀವ್ (36) ತನ್ನ ನಾಲ್ಕೂ ಮಕ್ಕಳನ್ನು ಹತ್ಯೆ ಮಾಡಿ ಬಳಿಕ ತಾನೂ ಸಾವನ್ನಪ್ಪಿದ್ದಾನೆ.

ಬುಧವಾರ ರಾತ್ರಿ ಊಟ ಮಾಡಿದ ಬಳಿಕ ಎಲ್ಲರೂ ಮಲಗಿದ್ದರು. ಮಕ್ಕಳು ಒಳಗೆ ಮಲಗಿದ್ದರೆ, ರಾಜೀವ್ ತಂದೆ ಪೃಥ್ವಿರಾಜ್ ಮನೆಯ ಹೊರಗೆ ಮಲಗಿದ್ದರು. ತಲೆಯಲ್ಲಿ ಕೆಟ್ಟ ಆಲೋಚನೆ ತುಂಬಿಕೊಂಡಿದ್ದ ರಾಜೀವ್, ತಡರಾತ್ರಿ ಎದ್ದು ನಾಲ್ಕೂ ಮಕ್ಕಳನ್ನು ಕೊಂದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ಕಲಹದಿಂದ ಘಟನೆ ಎಂದು ಪೊಲೀಸರ ಶಂಕೆಮಕ್ಕಳ ಕೊಲೆ ಬಳಿಕ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಪೂರ್ಣ ಘಟನೆಗೆ ನಿಖರ ತಿಳಿದುಬಂದಿಲ್ಲ. ಆದರೆ, ಕೌಟುಂಬಿಕ ಕಲಹದಿಂದ ಹೀಗೆ ಮಾಡಿರಬಹುದೆಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಗೊತ್ತಾಗಿದ್ದು ಹೇಗೆ?: ತಾನು ಹೊರಗಡೆ ಮಲಗಿದ್ದರೆ, ತನ್ನ ಮಕ್ಕಳೊಂದಿಗೆ ರಾಜೀವ್ ಒಳಗಡೆ ಮಲಗಿದ್ದ. ಗುರುವಾರ ಬೆಳಗ್ಗೆ ಎದ್ದಾಗ ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಹಲವು ಬಾರಿ ಕೂಗಿದರೂ ಯಾರು ಎದ್ದು ಬಾಗಿಲು ತೆರೆಯಲಿಲ್ಲ. ಅನುಮಾನ ಬಂದು ಬಾಗಿಲು ಒಡೆದು ನೋಡಿದಾಗ ಮೊಮ್ಮಕ್ಕಳ ರಕ್ತಸಿಕ್ತ ಮೃತದೇಹಗಳು ಬಿದ್ದಿದ್ದವು. ಕೋಣೆಯಲ್ಲಿ ಅಲ್ಲಲ್ಲಿ ರಕ್ತ ಹರಡಿತ್ತು. ಮಕ್ಕಳ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಸೀಳಿದ್ದರಿಂದ ರಕ್ತ ಹರಿಯುತ್ತಿತ್ತು. ರಾಜೀವನ ಶವವೂ ಹತ್ತಿರದಲ್ಲೇ ಬಿದ್ದಿತ್ತು. ಘಟನೆ ನಡೆದಾಗ ರಾಜೀವನ ಪತ್ನಿ ಮನೆಯಲ್ಲಿ ಇರಲಿಲ್ಲ. ಅವಳು ತನ್ನ ತವರು ಮನೆಗೆ ಹೋಗಿದ್ದಳು. 13 ವರ್ಷದ ಸ್ಮೃತಿ, 9 ವರ್ಷದ ಕೀರ್ತಿ, 7 ವರ್ಷದ ಪ್ರಗತಿ ಮತ್ತು 5 ವರ್ಷದ ಮಗ ರಿಷಭ್ ಈ ಎಲ್ಲ ಮೊಮ್ಮಕ್ಕಳ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು ಎಂದು ಘಟನೆ ಕುರಿತು ರಾಜೀವ್ ತಂದೆ ಪೃಥ್ವಿರಾಜ್ ಅಳಲು ತೋಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

14 ವರ್ಷಗಳ ಹಿಂದೆ ನಡೆದಿದ್ದ ಮದುವೆಕಳೆದ 14 ವರ್ಷಗಳ ಹಿಂದೆ ಕ್ರಾಂತಿ ಎಂಬಾಕೆಯನ್ನು ಮದುವೆಯಾಗಿದ್ದ ರಾಜೀವ್ ಇಲ್ಲಿಯವರೆಗೆ ಸುಖವಾಗಿದ್ದರು. 5 ಜನ ಗಂಡು ಮಕ್ಕಳಲ್ಲಿ ರಾಜೀವ್ ಹಿರಿಯ ಮಗ. ಆದರೆ, ಕಳೆದೊಂದು ವರ್ಷದಿಂದ ಗಂಡ -ಹೆಂಡತಿ ನಡುವೆ ಆಗಾಗ ಸಣ್ಣ-ಪುಟ್ಟ ಜಗಳ ನಡೆಯುತ್ತಿತ್ತು. ಒಂದು ವರ್ಷದ ಹಿಂದೆ ಅಪಘಾತವಾಗಿದ್ದರಿಂದ ರಾಜೀವನ ತಲೆಗೆ ಗಂಭೀರವಾದ ಗಾಯವಾಗಿತ್ತು. ವಾಸಿಗಾಗಿ ಈಗಲೂ ಔಷಧ ತೆಗೆದುಕೊಳ್ಳುತ್ತಿದ್ದ. ಗಾಯದಿಂದಾಗಿ, ಆತ ಕೆಲವೊಮ್ಮೆ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದ. ಆಗಾಗ ತುಂಬಾ ಕೋಪಗೊಳ್ಳುತ್ತಿದ್ದ. ಹಿಂದಿನ ದಿನವೇ ಅವನು ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದ. ಜಗಳದ ಬಳಿಕ ಅವನ ಹೆಂಡತಿ ಕೋಪಗೊಂಡು ತನ್ನ ಹೆತ್ತವರ ಮನೆಗೆ ಹೋಗಿದ್ದಳು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಕಿರಿಯ ಮಗ ಅಂಕಿತ್ ಎಂಬಾತ ಒಂದೂವರೆ ವರ್ಷದ ಹಿಂದೆ ಮೃತಪಟ್ಟಿದ್ದಾನೆ ಎಂದು ಪೃಥ್ವಿರಾಜ್ ಕಣ್ಣೀರು ಹಾಕಿದ್ದಾರೆ.

ಘಟನೆ ಬಗ್ಗೆ ಎಸ್​​​ಪಿ ಪ್ರತಿಕ್ರಿಯೆಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡದ ಶಹಜಹಾನ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ಕೂಡ ಪರಿಶೀಲನೆ ನಡೆಸಿದರು.

ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಕೌಟುಂಬಿಕ ಕಲಹದಿಂದಾಗಿ ಯುವಕನೊಬ್ಬ ತನ್ನ ನಾಲ್ವರು ಮಕ್ಕಳನ್ನು ಕೊಂದು ತಾನು ಮೃತಪಟ್ಟಿದ್ದಾನೆ ಎಂಬ ಮಾಹಿತಿ ಬಂದಿತ್ತು. ಪೊಲೀಸರು ಸ್ಥಳಕ್ಕೆ ತಲುಪಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ರಾಜೇಶ್ ದ್ವಿವೇದಿ ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!