Ad imageAd image
- Advertisement -  - Advertisement -  - Advertisement - 

ಮಹಿಳೆ ತಬ್ಬಿಕೊಂಡು ಪರಾರಿಯಾಗಿದ ಕಾಮುಕ ಅರೆಸ್ಟ್ 

Bharath Vaibhav
ಮಹಿಳೆ ತಬ್ಬಿಕೊಂಡು ಪರಾರಿಯಾಗಿದ ಕಾಮುಕ ಅರೆಸ್ಟ್ 
WhatsApp Group Join Now
Telegram Group Join Now

ಬೆಂಗಳೂರು: ನಗರದಲ್ಲಿ ವಾಯು ವಿಹಾರದ ವೇಳೆಯಲ್ಲಿ ಮಹಿಳೆಯೊಬ್ಬರನ್ನು ಓಡಿಸಿಕೊಂಡು ಬಂದಿದ್ದಂತ ವ್ಯಕ್ತಿಯೊಬ್ಬ ಆಕೆಗೆ ಮುತ್ತಿಟ್ಟಿದ್ದನು. ಈ ಮೂಲಕ ಅಸಭ್ಯವಾಗಿ ವರ್ತನೆಯನ್ನು ತೋರಿದ್ದನು. ಈ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್.8ರಂದು ಮುಂಜಾನೆ ವಾಕಿಂಗ್ ಹೋಗುತ್ತಿದ್ಧ ಮಹಿಳೆಯನ್ನು ಕಾಮುಕನೊಬ್ಬ ತಬ್ಬಿ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿತ್ತು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು, ಆರೋಪಿ ಸುರೇಶ್ ಎಂಬಾತನನ್ನು ಬಂಧಿಸಿದ್ದಾರೆ.

ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ದಿನಾಂಕ 02-08-2024ರಂದು ಬೆಳಿಗ್ಗೆ‌ ನಡೆದಿದೆ ಎನ್ನಲಾದ ಘಟನೆ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನೊಂದ ಮಹಿಳೆ ಉತ್ತರ ಭಾರತ ಮೂಲದವರಾಗಿದ್ದು, ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಸ್ನೇಹಿತೆಯರೊಂದಿಗೆ ವಾಕಿಂಗ್ ಹೋಗುತ್ತಿದ್ದರು.

ಶುಕ್ರವಾರ ಮುಂಜಾನೆ ತನ್ನ ಸ್ನೇಹಿತೆಯರಿಗಾಗಿ ಕಾಯುತ್ತಿದ್ದಾಗ ದಿಢೀರ್​ ಬಂದಿದ್ದ ಆರೋಪಿ, ಹಿಂಬದಿಯಿಂದ ಮಹಿಳೆಯ ಕೈಹಿಡಿದು, ತನ್ನ ಒಂದು ಕೈಯಿಂದ ಆಕೆಯ ಬಾಯಿ ಮುಚ್ಚಿದ್ದಾನೆ. ಈ ವೇಳೆ ಮಹಿಳೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರೂ ಸಹ ಆಕೆಯನ್ನು ಹಿಂಬಾಲಿಸಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ.

ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೋಣನಕುಂಟೆ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದರು. ಬಳಿಕ ಈಗ ಆರೋಪಿ ಸುರೇಶ್ ಎಂಬಾತನನ್ನು ಬಂಧಿಸಿದ್ದಾರೆ.

 

 

WhatsApp Group Join Now
Telegram Group Join Now
Share This Article
error: Content is protected !!