ಭೋಪಾಲ್: ರೈಲಿನ ಬೋಗಿಯ ಅಡಿ, ಚಕ್ರಗಳ ನಡುವೆ ಅಡಗಿಕೊಂಡು ಬರೋಬ್ಬರಿ 290 ಕಿ.ಮೀ ಪ್ರಯಾಣಿಸಿದ ವ್ಯಕ್ತಿಯನ್ನು ಮಧ್ಯಪ್ರದೇಶದ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಯುವಕನೊಬ್ಬ ಇಟಾರ್ಸಿ ಮತ್ತು ಜಬಲ್‌ಪುರ ನಡುವೆ ಪ್ರಯಾಣಿಸುತ್ತಿದ್ದ ದಾನಪುರ್ ಎಕ್ಸ್‌ಪ್ರೆಸ್ ರೈಲಿನ ಚಕ್ರಗಳ ನಡುವೆ ಅಡಗಿಕೊಂಡು ಜಬಲ್‌ಪುರವನ್ನು ತಲುಪಿದ್ದಾನೆ.
ರೈಲಿನ ಎಸ್ 4 ಕೋಚ್ ಅನ್ನು ಪರಿಶೀಲಿಸಿದಾಗ ರೈಲ್ವೇ ಸಿಬ್ಬಂದಿ ಯುವಕನೊಬ್ಬ ಚಕ್ರದ ನಡುವೆ ಅಡಗಿಕೊಂಡಿರುವುದು ಪತ್ತೆಯಾಗಿದೆ. ತಕ್ಷಣ ರೈಲ್ವೇ ಸಿಬ್ಬಂದಿ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಯುವಕನನ್ನು ಆರ್‌ಪಿಎಫ್ ವಶಕ್ಕೆ ತೆಗೆದುಕೊಂಡಿದೆ.
ಯುವಕನನ್ನು ವಿಚಾರಣೆಗೊಳಪಡಿಸಿದಾಗ ಆತ ರೈಲಿನಲ್ಲಿ ಪ್ರಯಾಣಿಸಲು ಹಣವಿಲ್ಲದ್ದರಿಂದ ಇಟಾರ್ಸಿಯಿಂದ ಜಬಲ್‌ಪುರಕ್ಕೆ ರೈಲಿನ ಕೋಚ್‌ನ ಅಡಿಯಲ್ಲಿ ಅಡಗಿಕೊಂಡು ಪ್ರಯಾಣಿಸಿದ್ದಾಗಿ ತಿಳಿಸಿದ್ದಾನೆ.