ರಾಯಚೂರಿಗೆ ನೀರಿಗಾರಿ ರೈತರೊಂದಿಗೆ ಬೀದಿಗಿಳಿದ ಜೆಡಿಎಸ್
ರಾಯಚೂರು: ಕೃಷ್ಣಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಹೋರಾಟ..
ರಾಯಚೂರು ಹೊರ ಭಾಗದ ಸಾತ್ ಮೈಲ್ ಬಳಿ ಹೆದ್ದಾರಿ ತಡೆದು ಆಕ್ರೋಶ..
ಶಾಸಕಿ ನೇತೃತ್ವದಲ್ಲಿ ರಸ್ತೆ ರೋಖೋ ಚಳುವಳಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ..
ನಮ್ಮ ರಾಜ್ಯದ ರೈತರ ಹಿತ ಕಾಪಾಡದೇ ಆಂದ್ರಕ್ಕೆ ನೀರು ಬಿಟ್ಟಿದ್ದಕ್ಕೆ ಕೆರಳಿರೊ ರೈತರು..
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಗಬ್ಬೂರಿನಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ವರೆಗೂ ಪಾದಯಾತ್ರೆ..
ಕಾಲುವೆಗೆ ನೀರಿಲ್ಲದೇ ಬೆಳೆ ಹಾನಿ ಭೀತಿ ಎದುರಿಸುತ್ತಿರೊ ರಾಯಚೂರು, ಯಾದಗಿರಿ ಜಿಲ್ಲೆ ರೈತರು..
ಭತ್ತ,ಮೆಣಸಿನಕಾಯಿ, ಶೇಂಗಾ ಬೆಳೆ ಹಾನಿ ಭೀತಿ..
ಸದ್ಯ ಕಟಾವಿನ ಹಂತಕ್ಕೆ ಬಂದಿರೊ ಬೆಳೆಗಳಿಗೆ ಏಪ್ರಿಲ್15 ರ ವರೆಗೆ ನೀರು ಹರಿಸುವಂತೆ ಆಗ್ರಹ..
ಇಂದು ಸಂಜೆ ವರೆಗೆ ನೀರು ಹರಿಸಲು ಡೆಡ್ ಲೈನ್ ನೀಡಿರೊ ಹೋರಾಟಗಾರರು..
ರಾಯಚೂರಿನಲ್ಲಿ ಜೆಡಿಎಸ್ ಶಾಸಕ ಕರೆಮ್ಮಾ ನಾಯಕ್ ಹೇಳಿಕೆ..
ಕೂಡಲೇ ಈ ಭಾಗಕ್ಕೆ ನೀರು ಹರಿಸಬೇಕು..
ರಾಜ್ಯ ಸರ್ಕಾರ ರೈತರ ಹಿತ ಕಾಪಾಡ್ತಿಲ್ಲ ಅಂತ ಕಿಡಿ..
ನೀರು ಹರಿಸದೇ ಇದ್ರೆ ಉಗ್ರ ಹೋರಾಟದ ಎಚ್ಚರಿಕೆ..ನೀಡಿದರು.
ವರದಿ: ಗಾರಲ ದಿನ್ನಿ ವೀರನ ಗೌಡ