ಗುಜರಾತ್ : ಗುಜರಾತ್ ನ ಅಂಕಲೇಶ್ವರ ದಲ್ಲಿ ಭಾರಿ ಪ್ರಮಾಣದ ಮಾದಕ ದ್ರವ್ಯ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. 5 ಸಾವಿರ ಕೋಟಿ ಮೌಲ್ಯದ 518 ಕೆಜಿ ಕೊಕೇನ್ ಸೀಜ್ ಮಾಡಲಾಗಿದ್ದು , ಭಾನುವಾರ ನಡೆದ ದೆಹಲಿ ಹಾಗೂ ಗುಜರಾತ್ ಪೊಲೀಸರ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ.
ಕಳೆದ ಕೆಲದಿನಗಳ ಹಿಂದೆ ದಕ್ಷಿಣ ದಿಲ್ಲಿಯ ಮಹಿಪಾಲ್ಪುರದಲ್ಲಿ 500 ಕೆಜಿ ಕೊಕೇನ್ ವಶಕ್ಕೆ ಪಡೆಯಲಾಗಿತ್ತು. ಹಾಗೆಯೇ ರಮೇಶ್ ನಗರದಲ್ಲಿ 200 ಕೆಜಿ ಕೊಕೇನ್ ಸೀಜ್ ಮಾಡಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದಾಗ ಇದು ಗುಜರಾತ್ ಮೂಲದ ಫಾರ್ಮಾ ಕಂಪನಿ ಅವಕಾರ್ ಡ್ರಗ್ಸ್ ಲಿಮಿಟೆಡ್ ನಿಂದ ಪೂರೈಕೆ ಅಗಿರೋದು ಬೆಳಕಿಗೆ ಬಂದಿತ್ತು.
ಎಲ್ಲಾ ತನಿಖೆ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಪ್ಲಾನ್ ಮಾಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿಯವರೆಗೆ ಸರಿಸುಮಾರು 1289 ಕೆಜಿ ಕೊಕೇನ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಹಾಗೆಯೇ 40 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಇದೆಲ್ಲದರ ಒಟ್ಟು ಮೌಲ್ಯ ಬರೋಬ್ಬರಿ 13 ಸಾವಿರ ಕೋಟಿ ಎಂದು ಅಂದಾಜಿಸಲಾಗಿದೆ.