ಐಗಳಿ: ಕರ್ನಾಟಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪು ನಂತೆ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಪಿಸುವಲ್ಲಿ ವಿಫಲವಾಗಿದೆ ರಾಜ್ಯದ ಮಾದಿಗ ಸುಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರದಲ್ಲಿ ಇರುವ ಮಾದಿಗ ಸಮುದಾಯದ ಸಚಿವರಾದ ಕೆ ಎಚ್ ಮುನಿಯಪ್ಪ ಮತ್ತು ಆರ್ ಬಿ ತಿಮ್ಮಾಪೂರ ಅವರೇ ರಾಜಿನಾಮೆ ಕೊಟ್ಟು ಹೊರ ಬನ್ನಿ ಎಂದು ಮಾದಿಗ ಮೀಸಲಾತಿ ಹೊರಾಟ ಸಮಿತಿ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ರಾಜೇಂದ್ರ ಐಹೊಳೆ ಆಗ್ರಹಿದರು.
ಅಥಣಿ ತಾಲೂಕಿನ ಕೂಕಟನೂರ ಗ್ರಾಮದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಮುಖಂಡರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಮಾದಿಗರ ವಿರುದ್ದಿ ಸರ್ಕಾರ ಅವರು ಕೊಟ್ಟ ಮಾತಿನಂತೆ ನಡೆಯದೆ ಮಾದಿಗರಿಗೆ ಮೊಸ ಮಾಡತ್ತಿದೆ ನಾಗಮೋಹನ ದಾಸ ಅವರಿಂದ ಜನಸಂಖ್ಯೆ ಗಣತಿ ಕಾರ್ಯ ಮುಗಿಸಿ ಕಳೆದ ಎರಡು ತಿಂಗಳಕಾಲ ಕಳೆದರು ಸರ್ಕಾರಕ್ಕೆ ವರದಿ ಒಪ್ಪಿಸುತ್ತಿಲ್ಲ ಕಾಲ ಹರಣ ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಂಮತ್ರಿ ಸಿದ್ದರಾಮಯ್ಯ ಅವರು ಮಾದಿಗರ ತಾಳ್ಮೆ ಪರಿಕ್ಷೆ ಮಾಡುತ್ತಿದ್ದಾರೆ ಈಗಾಗಲೇ ತಾಳ್ಮೆ ಕಟ್ಟಿ ಒಡದಿದೆ ಅಗಸ್ಟ೧೫ ಒಳಗಾಗಿ ಸರ್ಕಾರ ಜಾರಿ ಮಾಡದೆ ಇದ್ದರೆ ಸರ್ಕಾರದ ವಿರುದ್ಧ ಉಗ್ರಹ ಹೋರಾಟ ಮಾಡಲು ರಾಜ್ಯದ ಮಾದಿಗ ಸಮುದಾಯ ನಿರ್ಣಯ ಮಾಡಿದೆ ಅದರಂತೆ ಅಗಸ್ಟ್ 1 ರಂದು ಎಲ್ಲ ಜಿಲ್ಲೆಯಲ್ಲಿ ಆಯಾ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಒಂದು ವೇಳೆ ಸರ್ಕಾರ ಸ್ಪಂದಿಸದಿಂದರೆ ಉಗ್ರ ಹೋರಾಟ ಅನಿವಾರ್ಯ ಆದಕಾರಣ ಬೆಳಗಾವಿ ಜಿಲ್ಲೆ ಮಾದಿಗರು ಅಗಸ್ಟ 1 ರಂದ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಅಂತಿಮ ಹೊರಾಟದಲ್ಲಿ ಭಾಗವಹಿಸಲು ವಿನಂತಿಸಿದರು.
ನಂತರ ಕಾಂಗ್ರೆಸ್ ಪಕ್ಷದ ಮುಖಂಡರಾದ ಸುನೀತಾ ಐಹೊಳೆ ಅವರು ಮಾತನಾಡಿ ಮೊದಲ ಸಮಾಜ ನಂತರ ಪಕ್ಷ ಮಾದಿಗ ಸಮುದಾಯ ಮೂರು ದಶಕದಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬಂದಿದೆ ನಮ್ಮ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೆ ತರುವುದಾಗಿ ಘೋಷಿಸಿತು ಅದರಂತೆ ನಮ್ಮ ನಾಯಕರು ಸಿದ್ದರಾಮಯ್ಯ ಅವರು ಕೂಡಲೆ ವರದಿ ಪಡೆದು ಜಾರಿಗೊಳಿಸಬೇಕು ಪಕ್ಷ ಅಧಿಕಾರಕ್ಕೆ ಬರುವಲ್ಲಿ ಮಾದಿಗ ಸಮುದಾಯದ ಪಾತ್ರ ಪ್ರಮುಖವಾಗಿದೆ ಅದನ್ನು ಪರಿಗಣಿಸಿ ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಲೋಕೋಪಯೋಗಿ ಸಚಿವಾರ ಸತೀಶ ಜಾರಹೊಳಿ ಶಾಸಕರಾದ ಲಕ್ಷ್ಮಣ ಸವದಿ ಕಾಗವಾಡ ಶಾಸಕರಾದ ರಾಜು ಕಾಗೆ ಅವರು ನಮ್ಮ ಪರವಾಗಿ ದ್ವನಿ ಎತ್ತಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ರಾಜೇಂದ್ರ ಐಹೊಳೆ ಮಹಿಳಾ ಅಥಣಿ ತಾಲೂಕ ಅಧ್ಯಕ್ಷರಾದ ಸುನೀತಾ ಐಹೊಳೆ ಅಥಣಿ ತಾಲೂಕು ಅಧ್ಯಕ್ಷರಾದ ಹಣಮಂತ ಅರ್ಧವೂರ ಮುಖಂಡರಾದ ಬಸವಾರಜ ಹೊಳಿಕಟ್ಟಿ ಕುಮಾರ ಗಸ್ತಿ ಪರಸು ಮುರಗುಂಡಿ ಮಾಹಾದೇವ ಮಾನೆ ಆನಂದ ಹೊಳಿಕಟ್ಟಿ ರಾಜು ರಾಜಿಂಗಳೆ ಅನೀಲ ತಳವಾರ ಮುರಗೇಪ್ಪ ಅಪ್ಪಾಜಿ ಹಣಮಂತ ಮಾದರ ಆದರ್ಶ ಗಸ್ತಿ ಸುದೀಪ ಐಹೊಳೆ ಪ್ರಕಾಶ ಕಡಕೊಳ ರಾಜು ನಡುವಿನಮನಿ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು ಕುಮಾರ ಗಸ್ತಿ ಸ್ವಾಗತಿಸಿದರು ಹಣಮಂತ ಅರ್ದವೂರ ವಂದಿಸಿದರು.
ವರದಿ: ಆಕಾಶ ಎಮ್ ಐಗಳಿ




