ಸಿಂಧನೂರು : ಅ ೧೪,ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವ ಗಂಭೀರ ಪ್ರಕರಣವನ್ನು ಖಂಡಿಸಿ “ಸಂವಿಧಾನ ರಕ್ಷಣಾ ಹೋರಾಟ ಸಮಿತಿ” ನೇತೃತ್ವದಲ್ಲಿ ದಲಿತ, ಹಿಂದುಳಿದ. ಅಲ್ಪಸಂಖ್ಯಾತ. ಬಸವಪರ. ರೈತ ಸಂಘ. ಕಾರ್ಮಿಕ ಸಂಘ. ಮಹಿಳೆ ಸಂಘಟನೆ ಸೇರಿದಂತೆ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರ ಮೂಲಕ ರಾಷ್ಟ್ರೀಪತಿ ಗಳಿಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನೆ ನಗರದ ಎಪಿಎಂಸಿ. ಗಣೇಶ ದೇವಸ್ಥಾನದಿಂದ ವಿವಿಧ ವೃತ್ತಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ, ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಸುಪ್ರೀಂ ಕೋರ್ಟ್ ಸಿಜಿಐ ಮೇಲೆ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿದರು ಮಾತನಾಡಿ ಅಂಬೇಡ್ಕರ್ ವಾದಿಯಾದ ಬಿ.ಆರ್. ಗವಾಯಿ ದಲಿತ ಸಮುದಾಯದ ವ್ಯಕ್ತಿ ಉನ್ನತ ಪದವಿಅಲಂಕ ರಿಸೀರುವುದನ್ನು ಸಹಿಸದ ಮನುವಾದಿ ಶಕ್ತಿಗಳು ಅವರ ಮೇಲೆ ಎಂತಹ ವ್ಯವಸ್ಥಿತ ದಾಳಿ ನಡೆಸಲಾಗಿದೆ ಕೂಡಲೇ ದುಷ್ಕರ್ಮಿ ವಕೀಲ ರಾಕೇಶ್ ಕಿಶೋರ್ ಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಶಿವ ಸುಂದರ್. ಚಂದ್ರಶೇಖರ್ ಗೊರೆಬಾಳ. ಡಿ.ಎಚ್.ಪೂಜಾರ್, ಡಿ.ಎಚ್.ಕಂಬಳಿ ಸೇರಿದಂತೆ ಜಿಲಾನಿ ಪಾಷಾ, ಬಾಬರ್ ಪಾಷಾ, ಖಾದರ್ ಸುಭಾನಿ, ಚಿಟ್ಟಿಬಾಬು, ಬಿ.ಎನ್.ಯರದಿಹಾಳ, ಆರ್. ಅಬ್ರೂಸ್. ಅಲ್ಲಮ ಪ್ರಭು ಪೂಜಾರ್. ಮರಿಯಪ್ಪ ಜಾಲಿಹಾಳ. ಅಮರೇಶ್ ಗಿರಿಜಾಲಿ. ಹನುಮಂತ ಕರ್ನಿ. ನರಸಪ್ಪ ಕಟ್ಟಿಮನಿ. ಎಚ್.ಕೆ.ದಿದ್ದಿಗಿ ಮೌನೇಶ ಜಾಲವಾಡಗಿ, ನಿರುಪಾದಿ ಸಾಸಲಮರಿ, ಅಮೀನ್ ಪಾಷಾ ದಿದ್ದಿಗಿ, ಎಚ್.ಎನ್.ಬಡಿಗೇರ್. ನಾರಾಯಣ ಬೆಳಗುರ್ಕಿ. ನಾಗರಾಜ ಪೂಜಾರ್,ಬಸವರಾಜ ಬಾದರ್ಲಿ. ರಮೇಶ ಪಾಟೀಲ್ ಬೇರ್ಗಿ ಎಂ.ಗಂಗಾಧರ, ವೆಂಕಟೇಶ್ ಗಿರಿಜಾಲಿ.ಎಚ್. ಸೂಲಂಗಿ. ಪಂಪಾಪತಿ ಹಂಚಿನಾಳ. ವಕೀಲ ಶೇಖರಪ್ಪ ದುಮತಿ. ಇದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




