Ad imageAd image

ಆರೋಪಿಗಳನ್ನು ಬಂದಿಸುವಂತೆ ಗೋಕಾಕದಲ್ಲಿ ಭಾರಿ ಪ್ರತಿಭಟನೆ

Bharath Vaibhav
ಆರೋಪಿಗಳನ್ನು ಬಂದಿಸುವಂತೆ ಗೋಕಾಕದಲ್ಲಿ ಭಾರಿ ಪ್ರತಿಭಟನೆ
WhatsApp Group Join Now
Telegram Group Join Now

ಗೋಕಾಕ : ಮೂಡಲಗಿ ತಾಲೂಕಿನ ಯಾದವಾಡದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ರಾಯಬಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ಡಾ: ಅಂಬೇಡ್ಕರ ಭಾವ ಚಿತ್ರಕ್ಕೆ ಸೆಗಣಿ ಹಚ್ಚಿದ್ದನ್ನು ಖಂಡಿಸಿ ಗೋಕಾಕ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆದು ನೂರಾರು ದಲಿತರು ಪ್ರತಿಭಟನೆ ಮಾಡಿದರು.

ನಂತರ ದಿಕ್ಕಾರ ಕೂಗುತ್ತಾ ಪಾದಯಾತ್ರೆ ಮಾಡುತ್ತಾ ಪೋಲಿಸರ ನಡೆಯ ವಿರುದ್ದ ದಿಕ್ಕಾರ ಕೂಗುತ್ತಾ ತಹಸಿಲ್ದಾರ ಕಚೇರಿ ಮುಂದೆ ದರಣಿ ಮಾಡಿದರು.

ಪ್ರತಿಭಟನೆಯಲ್ಲಿ ಬಾಗಿಯಾದ ದಲಿತ ಮಹಿಳಾ ಅದ್ಯಕ್ಷ ಕಮಲಾ ಕರೆಮ್ಮನವರ ಇವರು ಮಾತನಾಡಿ ಹಲ್ಲೆ ಮಾಡಿದವನಿಗೆ ಉಪಾದಕ್ಷ ಹುದ್ದೆ ಬಂದಿದ್ದು ಡಾ: ಬಾಬಾಸಾಹೇಬ ಅಂಬೇಡ್ಕರ ಇವರು ನೀಡಿದ ಸಂವಿಧಾನದಿಂದ ಹೀಗಿರುವಾಗ ದುಡಿಯಲು ಬಂದಂತಹ ದಲಿತ ಯುವಕನ ಎಳಿಗೆ ಸಹಿಸಲಾಗದ ಕಲ್ಮೇಶ ಗಾಣಿಗೇರ ಇತ ಹಲ್ಲೆ ಮಾಡಿದ್ದು ಕೇವಲ ಸಿಗರೇಟು ನೇಪ ಮಾತ್ರ ಇದೆ, ಅದಕ್ಕಾಗಿ ಪೊಲೀಸ್ ಇಲಾಖೆಯವರು ಬಹಳಷ್ಟು ದೊಡ್ಡ ಅಪರಾದಿಗಳನ್ನು ಬಂದಿಸಿದ್ದಿರಿ, ಆದರೆ ಕಲ್ಮೇಶ ಗಾಣಿಗೇರನನ್ನು ಬಂದಿಸುವಲ್ಲಿ ವಿಫಲ ಆಗುತ್ತಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.

 

ಈ ಸಂದರ್ಭದಲ್ಲಿ ದಲಿತ ಮುಖಂಡ ಈಶ್ವರ ಗುಡಜ ಇವರು ಆರೋಪಿಗಳು ಇರುವ ಸ್ಥಳ ಗೊತ್ತಿದ್ದರೂ ಸಹ ಪೋಲಿಸರು ಅವರನ್ನು ಬಂದಿಸುವಲ್ಲಿ ಹಿಂದೇಟು ಹಾಕುತ್ತಿದ್ದಿರಿ. ತಮಗೆ ಇಷ್ಟೊಂದು ಚಳ್ಳೆ ಹಣ್ಣು ತಿನ್ನಿಸುತಿದ್ದಾನೆಂದರೆ ಅವನು ಎಷ್ಟು ಕ್ರಿಮಿನಲ್ ಇದ್ದಿರಬಹುದು ಎಂದು ಪ್ರಶ್ನಿಸಿ ಪೋಲಿಸರ ವಿರುದ್ದ ಹರಿಹಾಯ್ದರು.

ಅದಕ್ಕಾಗಿ ಪೋಲಿಸ ಇಲಾಖೆಯವರು ತಕ್ಷಣ ಹಲ್ಲೆ ಮಾಡಿದ ಆರೋಪಿಯನ್ನು ಬಂದಿಸಬೇಕೆಂದು ಒತ್ತಾಯಿಸಿ. ಇಲ್ಲದಿದ್ದರೆ ರಾಜ್ಯಾದಂತ ಪೋಲಿಸ ಠಾಣೆಗಳ ಎದುರು ಪ್ರತಿಬಟನೆ ಮಾಡುತ್ತೇವೆಂದು ತಹಸಿಲ್ದಾರ ಮುಖಾಂತರ ಗೃಹ ಸಚಿವರಿಗೆ ಮನವಿ ನೀಡಿದರು

ಈ ಸಂದರ್ಭದಲ್ಲಿ ಗೋಕಾಕ ದಲಿತ ಮುಖಂಡರಾದ ಗೋವಿಂದ ಕಳ್ಳಿಮನಿ,ರಮೇಶ ಹರಿಜನ, ಬಸವರಾಜ ಮೇಸ್ತ್ರಿ ರಫೀಕ ಬೊಕರೆ,ಶೆಟ್ಟೆಪ್ಪ ಮೇಸ್ತ್ರಿ ವಾಲ್ಮಿಕಿ ಸಂಘದ ರಾಜ್ಯಾದಕ್ಷ ಸುರೇಶ ಕುಮರೇಶಿ,ರಮೇಶ ಮೇಸ್ತ್ರಿ, ಅರ್ಜುನ ಗಂಡವ್ವಗೋಳ, ವಿಶಾಲ ಮೇಸ್ತ್ರಿ ಮುದಲಿಂಗ ಗೊರಬಾಳ, ಮಂಜುನಾಥ ಅಮ್ಮಣಗಿ, ರಮೇಶ ಮಾದರ, ರವಿ ಸಣ್ಣಕ್ಕಿ, ಸೇರಿದಂತೆ ಪ್ರತಿಭಟನೆಯಲ್ಲಿ ನೂರಾರು ದಲಿತ ಮುಖಂಡರು ಬಾಗಿಯಾಗಿದ್ದರು. ಇನ್ನು ಯಾವುದೆ ಅಹಿತಕರ ಘಟನೆ ನಡೆಯದಂತೆ ಪೋಲಿಸ ಇಲಾಖೆಯವರು ಬಂದೊ ಬಸ್ತ್ ಮಾಡಿದ್ದರು.

WhatsApp Group Join Now
Telegram Group Join Now
Share This Article
error: Content is protected !!