Ad imageAd image

ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರೊ.ಬಿ.ಕೃಷ್ಣಪ ಅವರು ಸ್ಥಾಪಿಸಿದ ದಸಂಸಯಿಂದ ನಡೆವ ಬೃಹತ್ ತಮಟೆ ಚಳುವಳಿ

Bharath Vaibhav
ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರೊ.ಬಿ.ಕೃಷ್ಣಪ ಅವರು ಸ್ಥಾಪಿಸಿದ ದಸಂಸಯಿಂದ ನಡೆವ ಬೃಹತ್ ತಮಟೆ ಚಳುವಳಿ
WhatsApp Group Join Now
Telegram Group Join Now

ಮೊಳಕಾಲ್ಮುರು:-ಸೆಪ್ಟೆಂಬರ್ 12 ರಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರೊ.ಬಿ.ಕೃಷ್ಣಪ ಅವರು ಸ್ಥಾಪಿಸಿದ ದಸಂಸಯಿಂದ ನಡೆವ ಬೃಹತ್ ತಮಟೆ ಚಳುವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಆಗಮಿಸಬೇಕು ಎಂದು ದಸಂಸ ಮುಖಂಡ ಜಿ.ಶ್ರೀನಿವಾಸಮೂರ್ತಿ ತಿಳಿಸಿದರು.

ಪಟ್ಟಣದ ಕನ್ನಡ ಭವನದಲ್ಲಿ ಸೋಮವಾರ ದಸಂಸಯಿಂದ ಏರ್ಪಡಿಸಿದ್ದ ಸೆಪ್ಟೆಂಬರ್ 12 ರಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆವ ಬೃಹತ್ ತಮಟೆ ಚಳುವಳಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳಮೀಸಲಾತಿ ಕಲಿಸಲು ಸಂವಿಧಾನಬದ್ದವಾದ ಅಧಿಕಾರವಿದೆ ಎಂದು ಆಗಸ್ಟ್ 1 ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾಗಿದೆ. ಈ ತೀರ್ಪನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರಕ್ಕೆ ಅಧಿಕಾರವಿದ್ದು, ಕೂಡಲೇ ಅನುಷ್ಠಾನ ಮಾಡುವಂತೆ ಆಗಹಿಸಲು ಬೃಹತ್ ತಮಟೆ ಚಳುವಳಿಯನ್ನು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಏಕ ಕಾಲದಲ್ಲಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಚಳುವಳಿಗೆ ಸಮುದಾಯದ ಪ್ರತಿಯೊಬ್ಬರೂ ಆಗಮಿಸಿ ನಮ್ಮಗಳ ನ್ಯಾಯಯುತ ಮೀಸಲಾತಿ ಪಡೆಯಲು ಸಂಘಟಿತರಾಗಬೇಕು. ದಶಕಗಳಿಂದಲೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ನಾವುಗಳು ಮೀಸಲಾತಿ ಪಡೆದು ಸಂವಿಧಾನದ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ತಾಲೂಕಿನ ಪ್ರತಿ ಗ್ರಾಮದಿಂದಲೂ ಜನರು ಜಿಲ್ಲಾ ಕೇಂದ್ರಕ್ಕೆ ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.ಸಭೆಯಲ್ಲಿ ದಸಂಸ ಪದಾಧಿಕಾರಿಗಳು ಬೃಹತ್ ತಮಟ ಚಳುವಳಿಯ ಕರ ಪತ್ರಗಳನ್ನು ಬಿಡುಗಡೆ ಮಾಡಿದರು.

ಸಭೆಯಲ್ಲಿ ದಸಂಸ ಸಂಚಾಲಕ ಒ.ಕಂಬಸಪ್ಪ, ರಾಯಾಪುರ ನಾಗೇಂದ್ರಪ್ಪ, ಕೋನಸಾಗರ ನಾಗೇಂದ್ರ, ಚಂದ್ರು, ಬಸವರಾಜ್, ಹೂನ್ನೂರಪ್ಪ, ಅಂಜಿನಿ, ತಿಪ್ಪೇಸ್ವಾಮಿ, ಮರಿಸ್ವಾಮಿ, ಅಶೋಕ್, ಸಿದ್ದಪ್ಪ, ಚಲುವರಾಜ್ ಹಾಗೂ ಇನ್ನಿತರರು ಇದ್ದರು.

ವರದಿ:- ಪಿಎಂ ಗಂಗಾಧರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!