ಗ್ರಾಮ ಪಂಚಾಯಿತಿ ಪಿಡಿಓ ಮೇಲೆ ಚಪ್ಪಲಿಯಿಂದ ತಳಿಸಿದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಪಂ ಕಾರ್ಯಾಲಯದಲ್ಲಿ ನಡೆದಿದೆ
ಗ್ರಾಪಂ ಕಚೇರಿಯಲ್ಲಿ ಪಿಡಿಒ ರತ್ನಮ್ಮ ಕುಳಿತಿದ್ದರು ಏಕಾಏಕಿ ದಿಢೀರ್ ನೆ ಆಗಮಿಸಿದ ಸದಸ್ಯೆ ಶಾಂತಗ್ಮ್ಮಾಗ್ರಾ. ಬಂಡಿವಡ್ಡರ ಅವರು ಪಿಡಿಒ ಜೊತೆಗೆ ವಾಗ್ದಾದಕ್ಕೆ ಇಳಿದು ತನ್ನ ಕಾಲಿನ ಚಪ್ಪಲಿಯಿಂದ ಪಿಡಿಓ ಮೇಲೆ ಹಲ್ಲೆ ಮಾಡಿದ್ದಾರೆ ಈ ವೇಳೆ ಬಿಡಿಸಲು ಬಂದ ಸಿಬ್ಬಂದಿಗಳ ಮೇಲು ಹಲ್ಲೆ ನಡೆಸಿದ್ದಾರೆ ಈ ವೇಳೆ ಸದಸ್ಯೆಯ ಪುತ್ರ ಭೀಮೇಶ್ ಬಂಡಿವಡ್ಡರ ಕೂಡಾ ಸಾಥ್ ನೀಡಿದ್ದಾರೆ ಎಂದು ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಲೆಕ್ಕ ಸಹಾಯಕ ಸಂಘದ ರಾಜ್ಯಾಧ್ಯಕ್ಷ ಮಹಾಂತೇಶ ಖೋತ ರವರು ಖಂಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ರತ್ನಮ್ಮ ರವರ ಮೇಲಿನ ಹಲ್ಲೆ ನಿಜಕ್ಕೂ ಖಂಡನೀಯ. ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತೀರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ರಕ್ಷಣೆಗೆ ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು..




