Ad imageAd image

ಕಳಪೆ ಕಾಮಗಾರಿಯ ಬಿಲ್ ಪಾವತಿಸಲು ಅಧ್ಯಕ್ಷರ ಕಾಲಿಗೆ ನಮಿಸಿದ ಸದಸ್ಯ

Bharath Vaibhav
ಕಳಪೆ ಕಾಮಗಾರಿಯ ಬಿಲ್ ಪಾವತಿಸಲು ಅಧ್ಯಕ್ಷರ ಕಾಲಿಗೆ ನಮಿಸಿದ ಸದಸ್ಯ
WhatsApp Group Join Now
Telegram Group Join Now

ಲಿಂಗಸ್ಗೂರು : ಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿ 2025-26 ನೇ ಸಾಲಿನ ಅಂದಾಜು ಬಜೆಟ್ ಮಂಡನೆ ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಒಟ್ಟು 11 ಕೋಟಿ 7 ಲಕ್ಷ ರೂಪಾಯಿ ಆದಾಯ ನಿರೀಕ್ಷೆ ಮಾಡಲಾಗಿದೆ ಇದರಲ್ಲಿ 11 ಕೋಟಿ 4 ಲಕ್ಷ ರೂಪಾಯಿ ಖರ್ಚಾಗಲಿದ್ದು ಒಟ್ಟು 2 ಕೋಟಿ 80 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.

ಪಟ್ಟಣ ಪಂಚಾಯತಿ ಸಭೆಯಲ್ಲಿ ಒಂಬತ್ತು ಜನ ಸದಸ್ಯರು ಭಾಗಿಯಾಗಿದ್ದು ಇನ್ನು ಉಳಿದ ನಾಲ್ಕು ಜನ ಸದಸ್ಯರು ಗೈರಾಗಿದ್ದರು ನಾಮ ನಿರ್ದೇಶಿತ ಸದಸ್ಯರಾದ ವಿಜ್ಞೇಶ್ ಗೌಡ, ಜೆ ಸುಭಾನ್ ಉಪಸ್ಥಿತರಿದ್ದರು.

ಕಾಮಗಾರಿಗೆ ಸಂಬಂಧಿಸಿದಂತೆ ಒಂದನೇ ವಾರ್ಡಿನಲ್ಲಿ ನಿಯಮಾವಳಿ ಪ್ರಕಾರ ಗುತ್ತಿಗೆದಾರರು ಕಾಮಗಾರಿ ಮುಗಿಸಿದ್ದಾರೆ ಆದರೆ ಬಿಲ್ ಪಾವತಿ ಮಾಡದೆ ತಡೆಹಿಡಿಯಲಾಗಿದೆ ಎಂದು ಸದಸ್ಯರಾದ ಸಿರಾಜುದ್ದೀನ್ ಪ್ರಶ್ನಿಸಿದಾಗ ಅಧ್ಯಕ್ಷರಾದ ಸಂಧಾನಿ ಎಂ ಡಿ ಇವರು ಕಾಮಗಾರಿಯಲ್ಲಿ ಕಳಪೆ ಪ್ರಮಾಣದಾಗಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಬಿಲ್ ತಡೆಯಲಾಗಿದೆ ಪರಿಶೀಲನೆ ಮಾಡಿ ಬಿಲ್ ಪಾವತಿ ಮಾಡಲಾಗುವುದೆಂದು ತಿಳಿಸಿದರು ಒಂದನೇ ವಾರ್ಡಿನ ಸದಸ್ಯ ಅಧ್ಯಕ್ಷರೇ ನಿಮ್ಮ ಕಾಲಿಗೆ ಬೀಳುವೆ ಕೈಮುಗಿವೆ ಬಿಲ್ ಪಾವತಿ ಮಾಡಿ ಎಂದು ಕಾಲಿಗೆ ಬೀಳಲು ಹೋದ ಪ್ರಸಂಗ ನಡೆಯಿತು ಆದರೆ ಯಾವುದೇ ಕಾಮಗಾರಿಯು ಟೆಂಡ ರೂಪದಲ್ಲಿ ಪಡೆದಿರುವ ಗುತ್ತಿದಾರಿಗೆ ಸಂಬಂಧಿಸಿದ ಬಿಲ್ ಆಗಿದ್ದು ಗುತ್ತಿಗೆದಾರರು ಕಳೆಪೆ ಪ್ರಮಾಣದಲ್ಲಿ ಕಾಮಗಾರಿ ಮಾಡಿರುವುದರಿಂದ ಬಿಲ್ ತಡೆಹಿಡಿಯಲಾಗಿದ್ದರು ಕಳಪೆ ಕಾಮಗಾರಿಗೆ ಬಿಲ್ ಪಾವತಿ ಮಾಡಿ ಎಂದು ಸದಸ್ಯರು ಅಧ್ಯಕ್ಷರು ಕಾಲಿಗೆ ಬೀಳಲು ಹೋಗಿ ಬಿಲ್ ಪಾವತಿ ಮಾಡಿಸುವುದು ನೋಡಿದರೆ ಕಳಪೆ ಕಾಮಗಾರಿಗೆ ಸದಸ್ಯರೇ ಕುಮ್ಮಕ್ಕು ನೀಡುತ್ತಿರುವ ರೀತಿ ಸ್ಪಷ್ಟವಾಗಿ ಕಾಣುತ್ತದೆ.

ಈ ರೀತಿ ಅಭಿವೃದ್ಧಿಯ ವಿಷಯದಲ್ಲಿ ಕಳಪೆ ಕಾಮಗಾರಿ ಮಾಡಿ ಮುಗಿಸುವ ಗುತ್ತಿದಾರಿಗೆ ಬಿಲ್ ಪಾವತಿ ಮಾಡಿಸುವುದನ್ನು ಬಿಟ್ಟು ಗುಣಮಟ್ಟದ ಕಾಮಗಾರಿಗೆ ಸದಸ್ಯರು ಮುಂದಾಗ ಬೇಕಾಗಿದೆ, ಕಳಪೆ ಪ್ರಮಾಣದ ಕಾಮಗಾರಿಗೆ ಅಧ್ಯಕ್ಷರು ಮತ್ತು ಮುಖ್ಯ ಅಧಿಕಾರಿಗಳು ಬಿಲ್ ಪಾವತಿ ಮಾಡುವರೇ,ಕಳಪೆ ಪ್ರಮಾಣದ ಕಾಮಗಾರಿ ಮಾಡಿದ್ದಾರೆಂದು ಸಾರ್ವಜನಿಕರು ನೀಡಿದ ದೂರಿನ ಆಧಾರದ ಮೇಲೆ, ಕಾಮಗಾರಿಯು ಗುಣಮಟ್ಟವಾಗಿದೆ ಎಂದು ವರದಿ ನೀಡಿರುವ ಜೆ ಇ ಮತ್ತು ಥರ್ಡ್ ಪಾರ್ಟಿ ಅಧಿಕಾರಿಗಳ ಮೇಲೆ ಯಾವ ಕ್ರಮ ಕೈಗಳುತೀರೆಂದು ಸಾರ್ವಜನಿಕರು ಸಂಘ-ಸಂಸ್ಥೆಯರು ಅಧ್ಯಕ್ಷರು ಮತ್ತು ಮುಖ್ಯ ಅಧಿಕಾರಿಗಳಿಗೆ ಪ್ರಶ್ನಿಸುವಂತಾಗಿದೆ ಕಳಪೆ ಕಾಮಗಾರಿಗೆ ತಡೆಹಿಡಿದ ಬಿಲ್ ಯಾವ ರೀತಿ ಪಾವತಿ ಮಾಡುತ್ತಾರೆ ಎಂಬುವುದು ಕಾಯ್ದು ನೋಡಬೇಕಾಗಿದೆ.

ಪಟ್ಟಣ ಪಂಚಾಯಿತಿ ಅನುದಾನದಲ್ಲಿ ಖರೀದಿಯಾಗಿರುವ ಬೋರ್ವೆಲ್ ಮೋಟಾರ್ ಗಳು ಒಂದು ಪಟ್ಟಣ ಪಂಚಾಯತಿಯಲ್ಲಿ ಇಲ್ಲ ಎಂದು ಸದಸ್ಯರು ತರೆಟೆಗೆ ತೆಗೆದುಕೊಂಡಾಗ ಆ ಎಲ್ಲ ಬೋರ್ವೆಲ್ ಮೋಟಾರ್ ಗಳು ಹಟ್ಟಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ತನಗೆ ಬೇಕಾದ ಸ್ಥಳದಲ್ಲಿ ಇಟ್ಟುಕೊಂಡಿದ್ದಾರೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಲು ಖರೀದಿಯಾಗಿರುವ ಬೋರ್ವೆಲ್ ಮೋಟಾರ್ ಗಳು ಐ ಎಸ್ ಐ ಗುಣಮಟ್ಟ ಒಂದಿದೆ ಅಥವಾ ಇಲ್ಲೊ ಎಂಬ ಮಾಹಿತಿಯು ಸಹ ಅಧ್ಯಕ್ಷ ,ಉಪಾಧ್ಯಕ್ಷ ಹಾಗೂ ಸದಸ್ಯರಿಗೂ ಮಾಹಿತಿ ನೀಡದೆ ಪಟ್ಟಣ ಪಂಚಾಯಿತಿಯಲ್ಲಿ ಇಡದೆ ತನ್ನ ಮನೆಯಲ್ಲಿ ಇಟ್ಟುಕೊಂಡಿರುವುದು ನೋಡಿದರೆ ಹಲವು ಅನುಮಾನಗಳಿಗೆ ಕಾರಣವಾಗಿದೆ..?

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಂ ಡಿ ಸಂಧಾನಿ, ಉಪಾಧ್ಯಕ್ಷರಾದ ನಾಗರತ್ನ ಗುರಿಕಾರ್, ಮುಖ್ಯ ಅಧಿಕಾರಿ, ಆರೋಗ್ಯ ಇಲಾಖೆ ಅಧಿಕಾರಿ, ಬಿಲ್ ಕಲೆಕ್ಟರ್ ಅಕ್ರಮ್, ರಾಜಪ್ಪ, ರೈಮಾನ್, ಸುನಿಲ್,
ಸದಸ್ಯರಾದ ಬಾಬು ನಾಯ್ಕೋಡಿ, ಸಿರಾಜುದ್ದೀನ್,ಇಸ್ಮಾಯಿಲ್ ಗೋರಿ, ಶ್ರೀಕಾಂತ್, ರಂಗನಾಥ್ ಮುಂಡರಗಿ,ದುರ್ಗಮ್ಮ, ರೇಣುಕಮ್ಮ, ಉಪಸಿತರಿದ್ದರು.

ವರದಿ :ಶ್ರೀನಿವಾಸ್ ಮಧುಶ್ರೀ 

WhatsApp Group Join Now
Telegram Group Join Now
Share This Article
error: Content is protected !!