ಮೆಡಿಕಲ್ ಕಾಲೇಜ್ ವೈದ್ಯರಿಗೆ ಪದವಿ ಪ್ರಧಾನ ಸಮಾರಂಭದಲ್ಲಿ ಡಾ. ಅಮಿತ್ ಜೋಶಿ ಹೇಳಿಕೆ
ನಿಪ್ಪಾಣಿ: ಜೀವನದಲ್ಲಿ ಮಿತ ಖರ್ಚು, ಪರಿಶ್ರಮ, ಆತ್ಮವಿಶ್ವಾಸ, ಹಾಗೂ ಗುರಿ ಹೊಂದುವ ಛಲ ವಿದ್ದರೆ ಏನೆಲ್ಲ ಸಾಧಿಸಬಹುದು. ಸ್ಪರ್ಧಾತ್ಮಕ ಯುಗದಲ್ಲಿಂದು ಆಯುರ್ವೇದಕ್ಕೆ ರಾಷ್ಟ್ರದ ಮಾನ್ಯತೆ ದೊರೆತಿದ್ದು, ಗುರಿ ಹಾಗೂ ಛಲದೊಂದಿಗೆ ಶಿಕ್ಷಣ ಪಡೆದುಕೊಂಡಿದ್ದರಿಂದ ಡಾಕ್ಟರೇಟ್ ಪದವಿ ಪಡೆದು ಹೊರಹೊಮ್ಮಿದ ವಿದ್ಯಾರ್ಥಿಗಳಿಗೆ ಇಂದು ಅವಿಸ್ಮರಣೀಯ ದಿನವೆಂದು ಡಾಕ್ಟರ್ ಅಮಿತ್ ಜೋಶಿ ತಿಳಿಸಿದರು.

ಅವರು ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಆಚಾರ್ಯ ದೇಶಭೂಷಣ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯ ಸನ್ 2018 =19 ಹಾಗೂ 2019 =20 ನೇ ಸಾಲಿನ ವಿದ್ಯಾರ್ಥಿಗಳಿಗೆ BAMS ಪದವಿ ಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾರಂಭದಲ್ಲಿ ವೇದಿಕೆಯಲ್ಲಿಯ ಗಣ್ಯರಿಂದ ಧನ್ವಂತರಿ ಪೂಜೆ ಹಾಗೂ ದೀಪಪ್ರಜ್ವಲನೆ ನಡೆಯಿತು. ಪ್ರಾರಂಭದಲ್ಲಿ ಪ್ರಾಂಶುಪಾಲ ಡಾಕ್ಟರ್ ಧೀರಜ್ ಪಾಟೀಲ್ ಸರ್ವರನ್ನು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಸಮಾರಂಭದಲ್ಲಿ ಲಟ್ಟೆ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ನ್ಯಾಯವಾದಿ ಪಿ ಆರ್ ಪಾಟೀಲ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಉನ್ನತ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಪ್ರಾರಂಭಿಸಿದ್ದು ಪ್ರಸಕ್ತ ವರ್ಷ 77 ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆದು ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
ಇಂದು ಅವರೆಲ್ಲರಿಗೂ ಮರೆಯಲಾಗದ ದಿನವೆಂದರು. ಇದೇ ಸಮಾರಂಭದಲ್ಲಿ ವಿದ್ಯಾರ್ಥಿಗಳ ಪರವಾಗಿ ಮೈಸೂರಿನ ಗಗನ್ ಹಾಗೂ ಬಡತನ ಪರಿಸ್ಥಿತಿಯಲ್ಲಿಯೂ ರೈತ ಕುಟುಂಬದಿಂದ ಅತ್ಯಂತ ಪರಿಶ್ರಮದಿಂದ ಡಾಕ್ಟರೇಟ್ ಪದವಿ ಪಡೆದು ಕುಟುಂಬದ ಜವಾಬ್ದಾರಿ ಹೊತ್ತ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ವಿದ್ಯಾರ್ಥಿ ಚೇತನ ಬಾಗೆವಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಲಟ್ಟೆ ಶಿಕ್ಷಣ ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಸಿಬ್ಬಂದಿ ವರ್ಗ ಹಾಗೂ ಪದವಿ ಪಡೆದ ವೈದ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




