ಮಾನ್ವಿ : ಇಂದು ಸಂಜೆ 5.10ಕೆ ಆಲ್ದಾಳ ಗ್ರಾಮ ಮತು ಗವಿ ಬಸವೇಶ್ವರ ಕ್ಯಾಂಪ್ ಅಮರಾವತಿ ಗಳಲ್ಲಿ ಅಕ್ರಮವಾಗಿ ವಿದ್ಯುತ್ ಅನ್ನು ಪಡೆದು ತಮ್ಮ ಹೊಲಗಳಿಗೆ ನಿರಂತರ ವಿದ್ಯುತ್ತನ್ನು ಸರಬರಾಜು ಮಾಡುತ್ತಿರುವ ಕಂಡುಬಂದಿರುತ್ತದೆ.
ಇದಕ್ಕೆ ಯಾವುದೇ ಪರವಾನಿಯನ್ನು ಪಡೆಯದೆ ಸರ್ಕಾರಕ್ಕೆ ಹಾನಿ ಉಂಟು ಆಗುತ್ತಿದ್ದು ಇದಕ್ಕೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳನ್ನು ತತ್ತಕ್ಷಣ ಅಧಿಕಾರದಿಂದ ವಜಾ ಮಾಡಬೇಕು.
ಸ್ಥಳಗಳಿಗೆ ಭೇಟಿ ನೀಡಿ ವಿಡಿಯೋ ಸಹಿತ ಫೋಟೋಗಳನ್ನು ಸೆರೆ ಹಿಡಿಯಲಾಗಿದ್ದು ತಕ್ಷಣ ಕಾರ್ಯ ಪ್ರವೃತ್ತ ಆಗದಿದ್ದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳಿಗೆ ದೂರನ್ನು ಸಲ್ಲಿಸಲಾಗುತ್ತದೆ.
ವರದಿ: ಶಿವ ತೇಜ