ಯಾದಗಿರಿ : ಜಿಲ್ಲೆಯ ಗಿರಿನಗರದ ನಿವಾಸಿ ಕಮಲಮ್ಮ (42) ಎಂಬುವವರು ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ (Self harm). ಸಿಳ್ಳೆ ಕ್ಯಾತ ಸಮುದಾಯಕ್ಕೆ ಸೇರಿದ ಇವರ ಕುಟುಂಬವನ್ನು ಸಮಾಜದ ಮುಖಂಡರು ಬಹಿಷ್ಕರಿಸಿದ್ದರು.
ಮಗನ ನಡವಳಿಕೆಯ ಮೇಲೆ ಅಕ್ರಮ ಸಂಬಂಧದ (Extra martial affair) ಆರೋಪ ಹೊರಿಸಿ, ಇಡೀ ಕುಟುಂಬಕ್ಕೆ ಮೀನುಗಾರಿಕೆ (Fishing) ನಡೆಸದಂತೆ ಮತ್ತು ಸಾರ್ವಜನಿಕವಾಗಿ ಬೆರೆಯದಂತೆ ನಿರ್ಬಂಧ ಹೇರಲಾಗಿತ್ತು.
ಈ ಅವಮಾನ ತಾಳಲಾರದೆ ಕಮಲಮ್ಮ ಅವರು ಜೋಳದಡಗಿ ಬ್ರಿಡ್ಜ್ ಮೇಲಿಂದ ಕೃಷ್ಣಾ ನದಿಗೆ ಜಿಗಿದಿದ್ದಾರೆ. ಸಾವಿಗೂ ಮುನ್ನ ತಮ್ಮ ಮಾಂಗಲ್ಯ ಸರವನ್ನು ಬ್ಯಾರೇಜ್ ಮೇಲೆ ಬಿಟ್ಟು ಹೋಗಿದ್ದು, ಇಂದು ಅಗ್ನಿಶಾಮಕ ದಳದವರು ಶವವನ್ನು ಹೊರತೆಗೆದಿದ್ದಾರೆ.
ಮಗಳ ಊರಿನ ಸಮೀಪವೇ ಈ ದುರಂತ ಸಂಭವಿಸಿದ್ದು, ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಭಾವಿಗಳ ಕಿರುಕುಳವೇ ಈ ಸಾವಿಗೆ ನೇರ ಕಾರಣವೆಂದು ಹೇಳಲಾಗುತ್ತಿದೆ.




