ನವದೆಹಲಿ: ಮನಕಲುಕುವ ಘಟನೆಯೊಂದರಲ್ಲಿ ನಾಯಿಯೊಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತನ್ನ ಮರಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಬಾಯಿಯಲ್ಲಿ ಹೊತ್ತುಕೊಂಡು ಬಂದಿರುವ ಘಟನ ಟರ್ಕಿಯಲ್ಲಿ ನಡೆದಿದೆ. ಜನವರಿ 13ರಂದು ಟರ್ಕಿಯ ಬೇಲಿಕ್ಕುಜು ಆಲ್ಫಾ ಪಶು ವೈದ್ಯಕೀಯ ಚಿಕಿತ್ಸಾಲಯದಲ್ಲಿ ಈ ಘಟನೆ ನಡೆದಿದ್ದು, ತಾಯಿ ಶ್ವಾನದ ರೋದನೆ ಕಂಡು ನೆಟ್ಟಿಗರು ಮರುಗಿದ್ದಾರ.
ವೈರಲ್ ಆಗಿರುವ ವಿಡಿಯೋ (Video Viral) ನೋಡುವುದಾದರೆ ಶ್ವಾನ ತನ್ನ ಮರಿಯನ್ನು ಬಾಯಿಯಲ್ಲಿ ಹೊತ್ತುಕೊಂಡು ಬಂದು ಅದನ್ನು ಆಸ್ಪತ್ರೆಯ ಬಾಗಿಲಲ್ಲಿ ಮಲಗಿಸುತ್ತದೆ. ಇದನ್ನು ನೋಡಿದ ಆಸ್ಪತ್ರೆ
ಸಿಬ್ಬಂದಿ ಅದರ ಬಳಿ ಬಂದು ಪರಿಶೀಲಿಸಿದ್ದು, ಬಳಿಕ ಅದನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.




