ಮುದ್ದೇಬಿಹಾಳ: –ಕರುಣೆಯಿಲ್ಲದ ತಾಯಿಯೊಬ್ಬಳು ಅದಾಗ ತಾನೇ ಜನಿಸಿದ್ದ ನವಜಾತ ಗಂಡು ಕೂಸನ್ನು ಹೆಣ್ಷು ಮಕ್ಕಳು ಬಹಿರ್ದೆಸೆಗೆ ಹೋಗುವ ಸ್ಥಳದಲ್ಲಿನ ಚರಂಡಿಯಲ್ಲಿ ಎಸೆದಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಆಲಕೊಪ್ಪರ ಗ್ರಾಮದಲ್ಲಿ ನಡೆದಿದೆ. ಕೂಸು ಮೃತಪಟ್ಟಿದೆ.
ತಾಯಿಯ ಹೊಟ್ಟಯೊಳಗಿನ ಮಾಸಿನ ಸಮೇತ ಕರುಳು ಬಳ್ಳಿಯನ್ನೂ ಕತ್ತರಿಸದೆ ಕೂಸನ್ನು ಎಸೆದಿರುವುದರ ಹಿಂದೆ ಹಲವು ಸಂಶಯಗಳು ಗ್ರಾಮಸ್ಥರಲ್ಲಿ ಉದ್ಭವವಾಗಿವೆ. ಕೂಸಿನ ವಾರಸುದಾರರ ಜಾಡು ಪತ್ತೇ ಆಗದ ಕಾರಣ ನಾಯಿ, ಹಂದಿಗಳಿಗೆ ಕೂಸಿನ ದೇಹ ಆಹಾರವಾಗದಂತಿರಲು ಗ್ರಾಮಸ್ಥರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮುದ್ದೇಬಿಹಾಳ ಪೋಲಿಸರು ಗ್ರಾಮಕ್ಕೆ ಆಗಮಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಕೂಸಿನ ತಾಯಿಗೆ ಗ್ರಾಮಸ್ಥರು ಹಿಡಿಶಾಪ ಹಾಕಿ ಟೀಕಿಸಿದರು.
ವರದಿ :ಅಲಿ ಮಕಾನದಾರ