ಸಿಂಧನೂರು : -ತಾಲೂಕಿನ ಹೊಸಳ್ಳಿ (ಇಜೆ ) ಕ್ಯಾಂಪಿನಲ್ಲಿ ಒಬ್ಬ ಬುದ್ಧಿಮಾಂದ್ಯ ಯುವಕ ಸುಮಾರು ದಿನಗಳಿಂದ ನಗರದಲ್ಲಿ ಹರುಕು ಗಲೀಜು ಬಟ್ಟೆ ಯದ್ವ ತದ್ವ ಬೆಳೆದ ಕೂದಲು ಬಿಟ್ಟುಕೊಂಡು ಹೊಟ್ಟೆಗೆ ಸರಿಯಾದ ಆಹಾರವಿಲ್ಲದೆ ತಿರುಗಾಡುತ್ತಿದ್ದ ವ್ಯಕ್ತಿ “ಅಕ್ಷಯ ಆಹಾರ ಜೋಳಿಗೆ ಟ್ರಸ್ಟಿನ ಕಾರ್ಯದರ್ಶಿ ಅಶೋಕ ನಲ್ಲ. ಅವರ ಕಣ್ಣಿಗೆ ಬೀಳುತ್ತಾನೆ ಆ ಬುದ್ಧಿಮಾಂದ್ಯ ಯುವಕನನ್ನು ಹೊಸಳ್ಳಿ ಕ್ಯಾಂಪಿನ ಗೆಳೆಯರ ತಂಡದೊಂದಿಗೆ ಹಿಡಿದು ಆತನ ತಲೆ ಕೂದಲನ್ನು ಕತ್ತರಿಸಿ.

ಸ್ವಚ್ಛವಾಗಿ ಸ್ನಾನ ಮಾಡಿಸಿ ಆ ಬುದ್ಧಿಮಾಂದ್ಯನಿಗೆ ಹೊಸ ಬಟ್ಟೆಗಳನ್ನು ತೊಡಸಿ ಅವನಿಗೆ ಒಳ್ಳೆ ಊಟ ಮಾಡಿಸುವುದರಿಂದ ಒಂದು ಒಳ್ಳೆಯ ಪರೋಪಕಾರ ಕೆಲಸ ಮಾಡಿ ಜನಗಳ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಅಕ್ಷಯ ಆಹಾರ ಜೋಳಿಗೆ, ಟ್ರಸ್ಟಿನ ಕಾರ್ಯದರ್ಶಿ ಅಶೋಕ್ ನಲ್ಲ ರವರು ತಮ್ಮ ಟೆಸ್ಟ್ ನ ಮೂಲಕ ಇಂಥ ಬುದ್ಧಮಾಂದರನ್ನು. ಮಾನಸಿಕ ಹಸ್ತವ್ಯಸ್ತರನ್ನು ವೃದ್ಧ ರನ್ನು ಕರೆದುಕೊಂಡು ಹೋಗಿ ಅನಾಥಾಶ್ರಮಗಳಿಗೆ ಬಿಟ್ಟಿದ್ದಾರೆ ಇದಲ್ಲದೆ.. ಮದುವೆ, ತೊಟ್ಟಿಲು, ನಿಶ್ಚಿತಾರ್ಥ, ಇಂತಹ ಕಾರ್ಯಕ್ರಮಗಳಲ್ಲಿ ಉಳಿದ ಆಹಾರವನ್ನು ಶೇಖರಣೆ ಮಾಡಿಕೊಂಡು ಅನಾಥಾಶ್ರಮಗಳಿಗೆ ಹಾಗೂ ಒಂದು ಹೊತ್ತಿನ ಊಟವಿಲ್ಲದೆ ಬಳಲುತ್ತಿರುವರಿಗೆ ಅನ್ನ ನೀಡಿ ಅನ್ನದಾಸೋಹಿ ನಲ್ಲ. ಎಂದೇ ಹೆಸರಾಗಿದ್ದಾರೆ.
ಇಂಥವರಿಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ಕೊಡಲಿ ಎಂದು ಸಾರ್ವಜನಿಕರ ಮಾತಾಗಿದೆ. ನಲ್ಲ ರವರ ಒಳ್ಳೆ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತ ವರು – ಶಂಕ್ರಪ್ಪ. ಮಲ್ಲಯ್ಯ.ಯಲ್ಲಪ್ಪ ಬಾಲಪ್ಪ.ಹಾಗೂ ಪರಶುರಾಮ್ ಮಾಸ್ಟರ್. ನಾಗರಾಜ್ ಗೌಡ.ಮುತ್ತಣ್ಣ ಗೌಡ.
ವರದಿ:- ಬಸವರಾಜ ಬುಕ್ಕನಹಟ್ಟಿ




