ನಟ ದರ್ಶನ್ ಗಾಗಿ ಒಂದು ವರ್ಷದ ಮಗುವಿಗೆ ಖೈದಿಯಂತೆ ಪೋಟೋಶೋಟ್

Bharath Vaibhav
ನಟ ದರ್ಶನ್ ಗಾಗಿ ಒಂದು ವರ್ಷದ ಮಗುವಿಗೆ ಖೈದಿಯಂತೆ ಪೋಟೋಶೋಟ್
WhatsApp Group Join Now
Telegram Group Join Now

ಬೆಂಗಳೂರು :ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದೆ. ಆದರೂ ದರ್ಶನ್ ಮೇಲಿನ ಹುಚ್ಚು ಅಭಿಮಾನ ಮಾತ್ರ ಕೆಲವರಿಗೆ ಕಡಿಮೆಯಾಗಿಲ್ಲ. ಇಲ್ಲೋರ್ವ ವ್ಯಕ್ತಿ ನಟ ದರ್ಶನ್ ಗಾಗಿ ತನ್ನ ಒಂದು ವರ್ಷದ ಮಗುವನ್ನೇ ಖೈದಿಯಂತೆ ಬಿಂಬಿಸಿದ್ದಾನೆ.

ಜೈಲು ಸೇರಿರುವ ದರ್ಶನ್ ಗೆ ಜೈಲಾಧಿಕಾರಿಗಳು ನೀಡಿರುವ ಖೈದಿ ನಂಬರನ್ನೇ ಅಭಿಮಾನಿಗಳು ವಾಹನಕ್ಕೆ ನೋಂದಣಿ ಮಾಡಿಸುತ್ತಿರುವುದನ್ನು, ಟ್ಯಾಟೂ ಹಾಕಿಸಿ ಹುಚ್ಚಾಟ ಮೆರೆದಿದ್ದನ್ನು ನೋಡಿದ್ದೇವೆ. ಆದರೆ ಇಲ್ಲೋರ್ವ ಅಭಿಮಾನಿ ಏನೂ ಅರಿಯದ ಕಂದಮ್ಮನಿಗೆ ಕೈದಿಯಂತೆ ಬಿಂಬಿಸಿ, ಖೈದಿ ನಂಬರ್ ಹಾಕಿ ಇನ್ನಷ್ಟು ವಿಲಕ್ಷಣತೆ ಮೆರೆದಿದ್ದಾನೆ.

ಹೆತ್ತ ಮಗುವನ್ನು ಕೈದಿಯಂತೆ ಬಟ್ಟೆ ತೊಡಿಸಿ, ಖೈದಿನಂಬರ್ ಹಾಕಿ ಫೋಟೋಶೂಟ್ ಮಾಡಿಸಲಾಗಿದೆ. ಒಂದು ವರ್ಷದ ಮಗಗುವಿಗೆ ಕೈದಿ ರೀತಿಯ ಬಟ್ಟೆ ಹಾಕಿಸಿ, ದರ್ಶನ್ ಗೆ ಜೈಲಿನಲ್ಲಿ ಕೊಟ್ಟಿರುವ ಖೈದಿ ನಂಬರ್ 6106 ಎಂದು ಬರೆದು ಫೋಟೋಶೋಟ್ ಮಾಡಿದ್ದೂ ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು, ಮಗು ಪಕ್ಕದಲ್ಲೇ ಕೈ ಕೋಳ ಮಾದರಿಯನ್ನೂ ಇಡಲಾಗಿದೆ. ಸಾಲದ್ದಕ್ಕೆ ಜೈ ಡಿ ಬಾಸ್ ಎಂದೂ ಬರೆಯಲಾಗಿದೆ. ಹುಚ್ಚು ಅಭಿಮಾನಿ ಹೆತ್ತ ಮಗುವನ್ನೇ ಖೈದಿ ಮಾಡಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!