ರೈಲಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಜೋಡಿಗಳು ಸುಮಾರು ಎರಡು ಗಂಟೆಗಳ ಕಾಲ ರೈಲಿನ ಶೌಚಾಲಯದೊಳಗೆ ಬೀಗ ಹಾಕಿಕೊಂಡು ಸಾರ್ವಜನಿಕ ಸೌಲಭ್ಯವನ್ನು ಖಾಸಗಿ ಕೋಣೆಯಂತೆ ಪರಿಗಣಿಸಿದರು ಹೌದು. ಜೋಡಿಗಳ ವರ್ತನೆಗೆ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದು, ಇದೇನು ಓಯೋ ರೂಮಾ..?ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ರೈಲಿನ ಶೌಚಾಲಯದೊಳಗೆ ಹೋದ ಜೋಡಿಗಳು ಎಷ್ಟೇ ಹೊತ್ತಾದರೂ ವಾಪಸ್ ಬರಲಿಲ್ಲ. ಪ್ರಯಾಣಿಕರು ಶೌಚಾಲಯದ ಬಳಿ ಬಂದು ಕಾದು ಕಾದು ಸುಸ್ತಾಗಿದ್ದಾರೆ. ಎಷ್ಟೇ ಹೊತ್ತು ಆದರೂ ಬಾಗಿಲು ತೆಗೆಯಲಿಲ್ಲ.ಶೌಚಾಲಯವನ್ನು ಜೋಡಿಗಳು ಸುಮಾರು 2 ಗಂಟೆ ಬಳಸಿಕೊಂಡಿದ್ದು, ಕೊನೆಗೆ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಬರಬೇಕಾಯಿತು.
ಕೊನೆಗೂ ಬಾಗಿಲು ತೆರೆದು ಆ ವ್ಯಕ್ತಿ ಹೊರಗೆ ಬಂದು ಮಹಿಳೆಗೆ ಮುಟ್ಟು ಆಗುತ್ತಿದೆ ಮತ್ತು ನೋವು ಅನುಭವಿಸುತ್ತಿದ್ದಾಳೆ ಎಂದು ಹೇಳುತ್ತಾನೆ. ಆದರೆ, ಪ್ರಯಾಣಿಕರನ್ನು ದಿಗ್ಭ್ರಮೆಗೊಳಿಸಿದ್ದು ಮಹಿಳೆಯ ಪ್ರತಿಕ್ರಿಯೆ.
“ನನಗೆ ಏನಾದರೂ ಸಮಸ್ಯೆ ಇದ್ದರೆ, ನಾನು ಯಾರನ್ನು ಒಳಗೆ ಕರೆದುಕೊಂಡು ಹೋಗಬೇಕೋ ಅವರನ್ನು ಕರೆದುಕೊಂಡು ಹೋಗುತ್ತೇನೆ, ಅದು ನನ್ನ ಆಯ್ಕೆ” ಎಂದು ಹೇಳುತ್ತಾಳೆ. ಈ ವಿಡಿಯೋ ಆನ್ ಲೈನ್ ನಲ್ಲಿ ಭಾರಿ ವೈರಲ್ ಆಗಿದೆ.
ನೆಟ್ಟಿಗರ ತರಾಟೆ
ಈ ಕ್ಲಿಪ್ ವೈರಲ್ ಆಗಿ, ಸಾರ್ವಜನಿಕ ನಡವಳಿಕೆ, ನಾಗರಿಕ ಪ್ರಜ್ಞೆ ಮತ್ತು ಪ್ರಯಾಣಿಕರ ಹಕ್ಕುಗಳ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಯಿತು..
“ಸಾರ್ವಜನಿಕ ಸ್ಥಳದಲ್ಲಿ ಒಬ್ಬರ ಹಕ್ಕನ್ನು ಪ್ರತಿಪಾದಿಸುವುದು ಮತ್ತು ಅದನ್ನು ದುರುಪಯೋಗಪಡಿಸಿಕೊಳ್ಳುವುದು ನಿಜಕ್ಕೂ ಖಂಡನೀಯ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ರೈಲಿನ ಸ್ನಾನಗೃಹವು OYO ಕೊಠಡಿಯಲ್ಲ – ಅದು ನೂರಾರು ಪ್ರಯಾಣಿಕರಿಗೆ ಅವಶ್ಯಕವಾಗಿದೆ. ನಿಯಮಗಳು ಎಲ್ಲರಿಗೂ ಸಮಾನವಾಗಿವೆ. “ನನ್ನ ಆಶಯ” ಇತರರಿಗೆ ತೊಂದರೆಯಾಗದ ಹಂತದವರೆಗೆ ಮಾತ್ರ ಸರಿ” ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.”




