Ad imageAd image

ಪತ್ನಿಯ ಶೀಲಶಂಕಿಸಿ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ವಿಕೃತಿ ಪತಿ 

Bharath Vaibhav
ಪತ್ನಿಯ ಶೀಲಶಂಕಿಸಿ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ವಿಕೃತಿ ಪತಿ 
WhatsApp Group Join Now
Telegram Group Join Now

ಚಿತ್ರದುರ್ಗ : ಪತಿಯೋರ್ವ ಪತ್ನಿಯ ಶೀಲಶಂಕಿಸಿ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ವಿಕೃತಿ ಮೆರೆದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರಿನಲ್ಲಿ ನಡೆದಿದೆ.

ಪತಿ ನಾಗೇಶ್ ಎಂಬಾತ ತನ್ನ ಪತ್ನಿ ಪೂಜಾ ಮೇಲೆ ಈ ಕೃತ್ಯ ಎಸಗಿದ್ದಾನೆ. ಗಂಡ, ಮಾವ ಸೇರಿಕೊಂಡು ಬಲ ಕೆನ್ನೆ, ಎಡಗೈ, ಬಲ ತೊಡೆಯ ಹಿಂಭಾಗ ಮತ್ತು ಮುಂಭಾಗವನ್ನು ಬಹಳ ಕ್ರೂರವಾಗಿ ಸುಟ್ಟಿದ್ದಾರೆ.

ಪತಿ ನಾಗೇಶ್ ನೀನು ಮೊಬೈಲ್ ನಲ್ಲಿ ಬೇರೆಯವರ ಜೊತೆ ಮಾತನಾಡುತ್ತೀಯಾ ಎಂದು ಕ್ಷುಲ್ಲಕ ಕಾರಣಕ್ಕೆ ಪೂಜಾ ಮೇಲೆ ಗಲಾಟೆ ನಡೆದು ಹಲ್ಲೆ ನಡೆಸಿದ್ದಾರೆ. ಕಳೆದ ಆಗಸ್ಟ್ 15 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!