ಕೊಪ್ಪಳ : ಉರ್ದು ಬರಹ ಹೊಂದಿದ್ದ ರಾಷ್ಟ್ರಧ್ವಜ ಹೋಲುವ ತ್ರಿವರ್ಣ ಧ್ವಜವನ್ನು ದರ್ಗಾದ ಮೇಲೆ ಯುವಕನೋರ್ವ ಕಟ್ಟಿರುವಂತಹ ಘಟನೆ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ.
‘ಲಾ ಇಲಾಹ ಇಲ್ಲಲ್ಲಾ, ಮಹಮ್ಮದ್ ರಸೂಲ್ಲ’ ಎಂಬ ಉರ್ದು ಬರಹವನ್ನು ತ್ರಿವರ್ಣ ಧ್ವಜದ ಮೇಲೆ ಬರೆಯಲಾಗಿತ್ತು. ಈದ್ ಮಿಲಾದ್ ಸಂದರ್ಭದಲ್ಲಿ ಯಲಬುರ್ಗಾ ಪಟ್ಟಣದ 9 ನೇ ವಾರ್ಡಿನಲ್ಲಿರುವ ಬೀಬಿ ಫಾತೀಮಾ ಆಲಂ ದರ್ಗಾದ ಮಹ್ಮದ್ ಖಾಜಿ ಎಂಬ ಯುವಕ ಧ್ವಜವನ್ನು ಕಟ್ಟಿದ್ದ. ಘಟನೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಧ್ವಜವನ್ನು ಕೆಳಗೆ ಇಳಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಡಿಯೋ ನೋಡಿ.