ಹೊಸ ನೆಲ್ಲೂಡಿ ಗ್ರಾಮದಲ್ಲಿ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಕಂಪ್ಲಿ : ದನಕರುಗಳ ಮೇವಿಗಾಗಿ ಸಂಗ್ರಹಿಸಿದ್ದ 30 ಬಂಡಿಯಷ್ಟು ಹುಲ್ಲಿನ ಬಣವೆಗೆ ನಿನ್ನೆ ತಡ ರಾತ್ರಿ ಕೆಲ ಕಿಡಿಗೇಡಿಗಳು ಬಣವೆಗೆ ಬೆಂಕಿ ಹಚ್ಚಿದ ಘಟನೆ ಕುರುಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ನೆಲ್ಲೂಡಿ ಗ್ರಾಮದಲ್ಲಿ ನಡೆದಿದೆ.
ಕಳೆದ ಮೂರು ತಿಂಗಳಿಂದ ಗ್ರಾಮದಲ್ಲಿ ರಾತ್ರಿ ವೇಳೆ ಕಳ್ಳತನ, ಮನೆ ಬಾಗಿಲಿಗೆ ಕಲ್ಲು ಎಸೆಯುವುದು, ಅಂಗಡಿ ಹೊಡೆಯುವುದು ಮತ್ತು ಬಣಿವೆಗಳಿಗೆ ಬೆಂಕಿ ಹಚ್ಚುತ್ತಿದ್ದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ 30 ಬಂಡಿಯಷ್ಟು ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದೆ.
ಬೆಂಕಿ ಜ್ವಾಲೆಗೆ ಇಡೀ ಬಣವೆ ಸುಟ್ಟು ಬೂದಿಯಾಗಿದೆ. ಒಟ್ಟು 80 ಸಾವಿರ ರೂಪಾಯಿ ಮೌಲ್ಯದ ಹುಲ್ಲು ಸುಟ್ಟು ನಷ್ಟವಾಗಿದೆ ಎಂದು ರೈತ ತಮ್ಮ ಆಳಲನ್ನು ತೊಡಿಕೊಂಡಿದ್ದಾರೆ.
ಗ್ರಾಮದಲ್ಲಿ ಹೆಚ್ಚಾದ ಕಳ್ಳತನ, ಕಿಡಿಗೇಡಿತನಕ್ಕೆ ಅಧಿಕಾರಿಗಳು ಬ್ರೇಕ್ ಹಾಕುತ್ತಾರ ಎಂದು ಕಾದುನೋಡಬೇಕಿದೆ.
ವರದಿ: ಚೆನ್ನಕೇಶವ