Ad imageAd image

ಅನಾನಸ್ ಗಿಡದಲ್ಲಿ 60ಕ್ಕೂ ಹೆಚ್ಚು ಸಣ್ಣ ಹಣ್ಣುಗಳು

Bharath Vaibhav
ಅನಾನಸ್ ಗಿಡದಲ್ಲಿ 60ಕ್ಕೂ ಹೆಚ್ಚು ಸಣ್ಣ ಹಣ್ಣುಗಳು
WhatsApp Group Join Now
Telegram Group Join Now

ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯ ಶೇವಳಿ ಗ್ರಾಮದ ರೈತರೊಬ್ಬರ ತೋಟದಲ್ಲಿ ಒಂದೇ ಅನಾನಸ್ ಗಿಡದಲ್ಲಿ 60ಕ್ಕೂ ಹೆಚ್ಚು ಸಣ್ಣ ಗಾತ್ರದ ಹಣ್ಣುಗಳು ಕಂಡುಬಂದಿದ್ದು, ಇದು ವಿರಳವಾದ ‘ಮೆಡುಸಾ ಪೈನಾಪಲ್’ (Medusa pineapple) ತಳಿಯಾಗಿದೆ.

ಮುಖ್ಯ ಹಣ್ಣಿನ ಸುತ್ತ 60ಕ್ಕೂ ಹೆಚ್ಚು ಸಣ್ಣ ಅನಾನಸ್‌ಗಳನ್ನು ಹೊಂದಿ, ಮೆಡುಸಾ ತಲೆಯಂತೆ ಕಾಣುವುದರಿಂದ ಈ ಹೆಸರು ಬಂದಿದೆ. ಇದು ಸಿಹಿ ಮತ್ತು ಹುಳಿ ಮಿಶ್ರಿತ ರುಚಿಯನ್ನು ಹೊಂದಿದ್ದು, ಉಷ್ಣವಲಯದ ಹವಾಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ.

ಈ ಅಪರೂಪದ ದೃಶ್ಯವು ಸ್ಥಳೀಯರನ್ನು ಮತ್ತು ಕೃಷಿ ತಜ್ಞರನ್ನು ಆಶ್ಚರ್ಯಗೊಳಿಸಿದೆ, ಇದನ್ನು ಸಾಮಾನ್ಯವಾಗಿ ಥೈಲ್ಯಾಂಡ್ ಅಥವಾ ತೈವಾನ್‌ನಿಂದ ಪರಿಚಯಿಸಲಾದ ಅಲಂಕಾರಿಕ ತಳಿ ಎಂದು ನಂಬಲಾಗಿದೆ.

ಇದನ್ನು ಮುಖ್ಯವಾಗಿ ಮನೆ, ತೋಟದ ಅಂದ ಹೆಚ್ಚಿಸಲು ಬೆಳೆಸುತ್ತಾರೆ, ಜೊತೆಗೆ ಇದರ ಹಣ್ಣು ತಿನ್ನಲು ಸಿಹಿಯಾಗಿರುತ್ತದೆ.

ಇನ್ನು ತಾಲೂಕಿನ ರೈತರಿಗೆ ಯಾವುದೇ ಬೆಳೆ ರಕ್ಷಿಸಿಕೊಳ್ಳುವುದೇ ಒಂದು ಸಾಹಸ. ಅದರಲ್ಲೂ ಅನಾನಸ್‌ಗಳಂತ ಬೆಳೆ ಗಳು ಚಿಕ್ಕದಾಗಿ ಮೂಡಿ ಬರುತ್ತಿದ್ದಂತೆ ಮಂಗಗಳು, ಕೆಂದಳಿಲು, ಹಂದಿಗಳು ಮತ್ತು ಹಾರುವ ಬೆಕ್ಕುಗಳು ಮುರಿದು ತಿನ್ನುತ್ತವೆ. ಆದರೂ ಎಲ್ಲ ಪ್ರಾಣಿಗಳ ಕಣ್ಣು ತಪ್ಪಿಸಿ ಉಳಿದ ಈ ಅನಾನಸ್‌ನಲ್ಲಿ ಆರಂಭದಲ್ಲಿ ಏನೂ ವಿಶೇಷತೆ ಕಂಡು ಬಂದಿರಲಿಲ್ಲ.

ದಿನ ಕಳೆದಂತೆ ಏನೋ ಬದಲಾವಣೆ ಕಂಡು ಬರತೊಡಗಿ ಮತ್ತೆ ಚಿಕ್ಕ ಚಿಕ್ಕ ಅನಾನಸ್ ಬೆಳೆದಿವೆ. ಈ ಚಿಕ್ಕ ಚಿಕ್ಕ ಅನಾನಸ್ ತಿನ್ನಲು ಬರುವುದಿಲ್ಲ. ಚಿಕ್ಕ ಮಕ್ಕಳ ಆಟಿಗೆಯಂತೆ ಚಿಕ್ಕದಾಗಿವೆ.

ಎಲ್ಲ ಅನಾನಸ್ ಹೊತ್ತ ದೊಡ್ಡ ಅನಾನಸ್‌ಗೆ ಸಿಹಿಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆಯೋ ಗೊತ್ತಿಲ್ಲ. ಒಟ್ಟಾರೆ ತುಂಬಾ ಸೌಂದರ್ಯ ಹೊತ್ತಂತಿರುವ ಅನಾನಸ್ ನೋಡುವುದೇ ಒಂದು ಖುಷಿಯಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!