Ad imageAd image

ಕೆಟ್ಟ ಡಿಸೆಂಬರ್ : 6 ಕಡೆ ವಿಮಾನ ಅಪಘಾತ – 236 ಮಂದಿ ಸಾವು 

Bharath Vaibhav
ಕೆಟ್ಟ ಡಿಸೆಂಬರ್ : 6 ಕಡೆ ವಿಮಾನ ಅಪಘಾತ – 236 ಮಂದಿ ಸಾವು 
WhatsApp Group Join Now
Telegram Group Join Now

ಹೊಸ ವರ್ಷದ ಆಗಮನಕ್ಕೂ ಮುನ್ನ 2024 ರ ಡಿಸೆಂಬರ್ ತಿಂಗಳು ವಿಮಾನಯಾನ ಸಂಸ್ಥೆಗಳಿಗೆ ಆಘಾತ ಉಂಟುಮಾಡಿದೆ. ಈ ತಿಂಗಳು (29 ಡಿಸೆಂಬರ್ 2024) ಇಲ್ಲಿಯವರೆಗೆ ಒಟ್ಟು 6 ಪ್ರಮುಖ ವಿಮಾನ ಅಪಘಾತಗಳು ಸಂಭವಿಸಿವೆ. ಇದರಲ್ಲಿ ಒಟ್ಟು 236 ಮಂದಿ ಸಾವನ್ನಪ್ಪಿದ್ದಾರೆ.

ಈ ಹಿನ್ನೆಲೆಯಲ್ಲಿ ಸದ್ಯ ವಿಮಾನಯಾನ ವಲಯದಲ್ಲಿನ ಸುರಕ್ಷತಾ ಪ್ರೋಟೋಕಾಲ್‌ಗಳು ಮತ್ತು ತಾಂತ್ರಿಕ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ದಕ್ಷಿಣ ಕೊರಿಯಾ: ಇಲ್ಲಿನ ಮುವಾನ್ ಇಂಟರ್‌ನ್ಯಾಶನಲ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ 179 ಜನರು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಇಬ್ಬರು ಭಾರೀ ಅವಘಡದಿಂದ ಪಾರಾಗಿದ್ದಾರೆ.

ಬ್ಯಾಂಕಾಕ್‌ನಿಂದ ಹಿಂದಿರುಗುತ್ತಿದ್ದ ಈ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ 32 ಅಗ್ನಿಶಾಮಕ ವಾಹನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ತರಲಾಗಿತ್ತು.

ಅಜರ್ಬೈಜಾನ್: ಇದಕ್ಕೂ ಮೊದಲು ಡಿಸೆಂಬರ್ 25 ರಂದು ಅಜೆರ್‌ಬೈಜಾನ್ ಏರ್‌ಲೈನ್ಸ್‌ನ ಎಂಬ್ರೇರ್ ಇಆರ್‌ಜೆ-190ಎಆರ್ ಕಝಾಕಿಸ್ತಾನ್‌ನ ಅಕ್ಟೌ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು. ಇದರಲ್ಲಿ 38 ಜನರು ಸಾವನ್ನಪ್ಪಿದರು. ಈ ವಿಮಾನವು ಬಾಕುದಿಂದ ಗ್ರೋಜ್ನಿಗೆ ಹಾರುತ್ತಿತ್ತು.

ತಾಂತ್ರಿಕ ದೋಷ ಹಾಗೂ ಹವಾಮಾನ ವೈಪರೀತ್ಯದ ಕಾರಣದಿಂದ ಮಾರ್ಗ ಬದಲಿಸಬೇಕಾಯಿತು. ಗ್ರೋಜ್ನಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಹಲವಾರು ಪ್ರಯತ್ನಗಳ ನಂತರ ವಿಮಾನವು ಅಕ್ಟೌ ವಿಮಾನ ನಿಲ್ದಾಣದ ಬಳಿ ನೆಲಕ್ಕೆ ಅಪ್ಪಳಿಸಿತು. ಅದರಲ್ಲಿ 67 ಪ್ರಯಾಣಿಕರಿದ್ದರು.

ಬ್ರೆಜಿಲ್: ಡಿಸೆಂಬರ್ 22 ರಂದು ದಕ್ಷಿಣ ಬ್ರೆಜಿಲ್‌ನ ಗ್ರಾಮಡೋ ನಗರದಲ್ಲಿ ಖಾಸಗಿ ವಿಮಾನವೊಂದು ಪತನಗೊಂಡಾಗ ಒಂದೇ ಕುಟುಂಬದ 10 ಸದಸ್ಯರು ಸಾವನ್ನಪ್ಪಿದರು. ಲ್ಯಾಂಡಿಂಗ್ ಸಮಯದಲ್ಲಿ ಉಂಟಾದ ಅವಘಡದಿಂದ 17 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪಪುವಾ ನ್ಯೂಗಿನಿಯಾ: ನಾರ್ತ್ ಕೋಸ್ಟ್ ಏವಿಯೇಷನ್‌ನಿಂದ ನಿರ್ವಹಿಸಲ್ಪಡುವ ಬ್ರಿಟನ್-ನಾರ್ಮನ್ BN-2B-26 ಐಲ್ಯಾಂಡರ್ ಡಿಸೆಂಬರ್ 22 ರಂದು ಪಪುವಾ ನ್ಯೂಗಿನಿಯಾದಲ್ಲಿ ಅಪಘಾತಕ್ಕೀಡಾಯಿತು. ವಿಮಾನದಲ್ಲಿದ್ದ ಎಲ್ಲಾ ಐವರು ಸಾವನ್ನಪ್ಪಿದರು. ಈ ಘಟನೆಯ ತನಿಖೆ ಇನ್ನೂ ನಡೆಯುತ್ತಿದೆ.

ಅರ್ಜೆಂಟೀನಾ: ಬೊಂಬಾರ್ಡಿಯರ್ BD-100-1A10 ಚಾಲೆಂಜರ್ 300 ಅರ್ಜೆಂಟೀನಾದ ಸ್ಯಾನ್ ಫೆರ್ನಾಂಡೋ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದ್ದು, ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ವಿಮಾನವು ಪಂಟಾ ಡೆಲ್ ಎಸ್ಟೆ ವಿಮಾನ ನಿಲ್ದಾಣದಿಂದ ಸ್ಯಾನ್ ಫೆರ್ನಾಂಡೋಗೆ ಹಾರುತ್ತಿತ್ತು. ಲ್ಯಾಂಡಿಂಗ್ ಆಗುತ್ತಿದ್ದ ವಿಮಾನವು ರನ್‌ವೇ ದಾಟಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿತು. ವಿಮಾನದ ಎಡಭಾಗ ಒಡೆದು ಪೈಲಟ್‌ಗಳು ಬೆಂಕಿಗೆ ಆಹುತಿಯಾಗಿದ್ದಾರೆ.

ಹೊನೊಲುಲು (ಹವಾಯಿ ರಾಜಧಾನಿ): ಕಾಮಕಾ ಏರ್ ಎಲ್‌ಎಲ್ ಸಿ ನಿರ್ವಹಿಸುತ್ತಿದ್ದ ಕಾಮಕಾ ಏರ್ ಸೆಸ್ನಾ 208 ಕಾರವಾನ್ ವಿಮಾನವು ಹೊನೊಲುಲುವಿನಲ್ಲಿರುವ ಡೇನಿಯಲ್ ಕೆ. ಇನೌಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದ್ದು, ಇಬ್ಬರೂ ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ತರಬೇತಿ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!