ಸಿರುಗುಪ್ಪ : ನಗರದ ಶ್ರೀ ಪ್ಯಾಟೆ ಆಂಜನೇಯ್ಯ ಸ್ವಾಮಿ ದೇವಸ್ಥಾನದಿಂದ ತಾಲೂಕು ಕ್ರೀಡಾಂಗಣದವರೆಗೆ ನಡೆದ ಶ್ರೀ ಸವಿತಾ ಮಹರ್ಷಿಯವರ ಜಯಂತಿಯ ನಿಮಿತ್ತ ಬೃಹತ್ ಭಾವಚಿತ್ರದ ಮೆರವಣಿಗೆಗೆ ತಾಲೂಕಾಧ್ಯಕ್ಷ ವೀರೇಂದ್ರ ಅವರು ಚಾಲನೆ ನೀಡಿದರು.
ನಂತರ ಮಾತನಾಡಿ ಎರಡು ಸಾವಿರ ವರ್ಷಗಳ ಸುಧೀರ್ಘ ಇತಿಹಾಸವಿರುವ ಸವಿತಾ ಸಮಾಜದ ಸಾಧನಗಳಾದ ಕತ್ತಿ, ಕನ್ನಡಿ, ಹಾಗೂ ಕತ್ತರಿಗಳನ್ನು ಅನೇಕ ಶಿಲಾಶಾಸನಗಳಲ್ಲಿ ಕೆತ್ತಲಾಗಿದೆ. ರಾಷ್ಟ್ರಕೂಟರು, ವಿಜಯನಗರ, ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಲ್ಲಿ ಕಾಣಬಹುದಾಗಿದೆ.

ಕಡಿಮೆ ಜನಸಂಖ್ಯೆಯಿರುವ ನಮ್ಮ ಸಮಾಜವು ಶ್ರೀ ಸವಿತಾ ಮಹರ್ಷಿಯವರ ಜಯಂತಿಯಿಂದಾದರೂ ಸಂಘಟಿತರಾಗಿ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ಗೌರವಾಧ್ಯಕ್ಷ ಪ್ರಕಾಶ, ಉಪಾಧ್ಯಕ್ಷ ರಾಜು, ಕಾರ್ಯದರ್ಶಿ ರಾಮು, ಖಜಾಂಚಿ ಜಗಧೀಶ, ಪದಾಧಿಕಾರಿಗಳಾದ ಅಂಬರೇಶ, ರಾಘವೇಂದ್ರ, ಸವಿತಾ ಇನ್ನಿತರ ಗ್ರಾಮಗಳಿಂದ ಆಗಮಿಸಿದ್ದ ಸವಿತಾ ಸಮುದಾಯದ ಮುಖಂಡರು, ಯುವಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




