ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಉತ್ತರ ಭಾರತದ ಹಲವೆಡೆ ಸೋಮವಾರ ಬೆಳಿಗ್ಗೆ ಭೂಕಂಪ ಸಂಭವಿಸಿದೆ . ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ.
ಭೂಕಂಪ ಬೆಳಿಗ್ಗೆ ಗಂಟೆ 5:36 ನಿಮಿಷಕ್ಕೆ ಸಂಭವಿಸಿದೆ. ದೆಹಲಿ ನೊಯ್ಡಾ, ಗುರ್‌ಗಾಂವ್‌ನಲ್ಲೂ ಭೂಕಂಪದ ಅನುಭವ ಆಗಿದೆ.ಭೂಮಿ ಗಡ ಗಡ ನಡುಗಿದ್ದಕ್ಕೆ ಜನರು ಭಯಭೀತಾರಾಗಿ ಮನೆಗಳಿಂದ ಓಡಿಬಂದಿದ್ದಾರೆ.
ಕೆಲವು ದಿನಗಳ ಹಿಂದೆ ಸ್ಥಳೀಯರು ಲಘು ಭೂಕಂಪನದ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.ಇದಾದ ಕೆಲವೇ ದಿನಗಳಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ.
ವಿಪರೀತ ಮಾಲಿನ್ಯದಿಂದ ದೆಹಲಿ ತತ್ತರಿಸಿದೆ. ಜನಸಂಖ್ಯೆ ಸ್ಫೋಟ, ವಾಯು ಮಾಲಿನ್ಯದಿಂದ ಬಳಲುತ್ತಿ ದೆ. ಇದೆಲ್ಲದರ ಪರಿಣಾಮ ಭೂಮಿ ನಡುಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.