ಸೇಡಂ: ತಾಲೂಕಿನ ಕೊಡ್ಲಾ ಗ್ರಾಮದ ಶ್ರೀ ಸಿಮೆಂಟ್ ಕಾರ್ಖಾನೆಯು ಕೊಡ್ಲಾ, ಬೆನಕನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ಅನ್ಯಾಯ ಮಾಡಿರುವ ಈ ಹಿಂದೆ ಕಾರ್ಖಾನೆ ವಿರುದ್ಧ ಹೋರಾಟ ಮಾಡಿದರು ಅದಕ್ಕೆ ಕಂಪನಿಗೆ 15ದಿನ ಗಡುವು ನೀಡಿದ ಬಳಿಕ ಹೋರಾಟ ವಿರಾಮ ಮಾಡಲಾಗಿತ್ತು.

ಆದರೆ ಶ್ರೀ ಸಿಮೆಂಟ್ ಕಾರ್ಖಾನೆಯು ಇದುವರೆಗೂ ಯಾವುದೇ ರೀತಿಯ ಪರಿಹಾರ ನೀಡುತ್ತಿಲ್ಲ ಮತ್ತು ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಅದ ಕಾರಣ ಮತ್ತೊಂದು ದಿನಾಂಕ ನಿಗದಿ ಮಾಡಿ ಕಂಪನಿ ವಿರುದ್ಧ ಉಗ್ರ ಹೋರಾಟಕ್ಕೆ ಸಿದ್ಧರಾಗಬೇಕಾಗಿದೆ ಎಂದು ಮಾಜಿ ಅಧ್ಯಕ್ಷರು ಎಪಿಎಂಸಿ ಸೇಡಂ ಸಿದ್ದು ಬಾನರ ಕೊಡ್ಲಾ ಅವರ ನೇತೃತ್ವದಲ್ಲಿ ರೈತರ ಜೊತೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಈ ಕುರಿತು ಮಾತನಾಡಿದ ಅವರು ಅನೇಕ ಅದೆಷ್ಟೋ ಹೋರಾಟಗಳು ಮಾಡಿದರು ಸಹ ಕಾರ್ಖಾನೆಯವರು ಸ್ಪಂದನೆ ನೀಡುತ್ತಿಲ್ಲ ಆದ ಕಾರಣ ಮುಂದಿನ ದಿನಗಳಲ್ಲಿ ರೈತರ ಜೊತೆ ಬಿಜೆಪಿ ಪಕ್ಷ ಕಾರ್ಖಾನೆ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಅದಕ್ಕೆ ಒಂದು ದಿನಾಂಕವನ್ನು ನಾವು ನಿಗದಿಪಡಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆನಕನಹಳ್ಳಿ ಗ್ರಾಮದ ರೈತರಾದ ಶರಣಪ್ಪ ತಂಗಾನೂರು, ಹಣಮಂತ ಜೋಗಿ, ಚಂದ್ರಂ ಜೋಗಿ ಹಾಗೂ ಕೊಡ್ಲಾ ಗ್ರಾಮದ ರೈತರಾದ ಕಾಶಿಮ್ ಅಲಿ, ಕಾಶಪ್ಪ ಹೊನ್ನಾಯಕ್, ಬಸವರಾಜ ರೆಡ್ಡಿ, ಸಾಬಣ್ಣ ದೀಬ್ಲಿ, ಕಿಷ್ಟಪ್ಪ ತಲ್ವಾರ್ ಸೇರಿದಂತೆ ಬೆನಕನಹಳ್ಳಿ ಮತ್ತು ಕೊಡ್ಲಾ ಗ್ರಾಮದ ಅನೇಕ ರೈತ ಭಾಂದವರು ಭಾಗಿಯಾಗಿದ್ದರು
ವರದಿ: ವೆಂಕಟಪ್ಪ ಕೆ ಸುಗ್ಗಾಲ್




