ಬೆಳಗಾವಿ (ನ.28) : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 03.12.2024 ರಂದು ಜರುಗುವ ಪ್ರಗತಿ ಪರಿಶೀಲನಾ ಸಭೆಯ ಅಂಗವಾಗಿ ಪೂರ್ವಭಾವಿ ಸಭೆಯನ್ನು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳಿಗೆ ಜರುಗಿಸಿ ಸೂಕ್ತ ಸಲಹೆ ಮತ್ತು ನಿರ್ದೇಶನಗಳನ್ನು ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಪ್ರಗತಿ ಪರಿಶೀಲನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಂಚಾಯತ್ ರಾಜ್ ವಿಷಯಗಳು :
ಕರವಸೂಲಾತಿ ಕುರಿತಂತೆ ಮೊಬೈಲ ಟವರ್, ಕೈಗಾರಿಕೆ ಕೆಂದ್ರಗಳು ಹಾಗೂ ಇತರೇ ಎಲ್ಲ ಖಾಸಗೀ ಕ್ಷೇತ್ರಗಳಿಂದ ಮೂಲಕಗಳಿಂದ ಮುಂದಿನ 15 ದಿನಗಳಲ್ಲಿ 50% ಪ್ರಗತಿ ಸಾಧಿಸಲು ಎಲ್ಲ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧರ ರವರು ಸೂಚನೆ ನೀಡಿದರು. ಅದರಂತೆ “ಸಕಾಲ” ಅಧಿನಿಯಮದಡಿ ಬಾಕಿ ಇರುವ ಅರ್ಜಿಗಳನ್ನು ಆದ್ಯತೆ ಮೇರೆಗೆ 03 ದಿನಗಳಲ್ಲಿ ವಿಲೇವಾರಿ ಮಾಡಲು ಕ್ರಮ ಜರುಗಿಸುವುದು, ಗ್ರಾಮ ಪಂಚಾಯತ ಹಂತದಲ್ಲಿ ವಾರ್ಡ ಸಭೆ, ಸಾಮಾನ್ಯ ಸಭೆ ಹಾಗೂ ಇತರೇ ಎಲ್ಲ ಸಭೆಗಳನ್ನು ಆನ್-ಲೈನ್ ಮೂಲಕ ನಿರ್ವಹಿಸಲು ಕಟ್ಟುನಿಟ್ಟಿನ ಕ್ರಮ ವಹಿಸುವುದು, ಗ್ರಾಮ ಪಂಚಾಯತ ಸಿಬ್ಬಂದಿಗಳ ಬಯೋ-ಮೆಟ್ರಿಕ್ ಮೂಲಕ ಹಾಜರಾತಿ ಕಡ್ಡಾಯಗೊಳಿಸಿ, ನಿಗದಿತ ಸಮಯದಲ್ಲಿ ಸಿಬ್ಬಂದಿಗಳ ಸಂಬಳ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾನ್ಯರು ಸೂಚನೆ ನೀಡಿದರು.
ಡಿಜಿಟಲ್ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 500 ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 486 ಗ್ರಾಮ ಪಂಚಾಯತ ಗ್ರಂಥಾಲಯಗಳು ಸರ್ಕಾರದಿಂದ ಮಂಜೂರಾಗಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 480 ಡಿಜಿಟಲ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಬಾಕಿ ಉಳಿದಿರುವ 6 ಹೊಸ ಗ್ರಾಮ ಪಂಚಾಯತಿಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣವಾದ ಕೂಡಲೇ ಡಿಜಿಟಲ್ ಗ್ರಂಥಾಲಯಗಳನ್ನಾಗಿ ಪರಿವರ್ತನೆ ಮಾಡಲು ಕ್ರಮವಹಿಸುವಂತೆ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ 15ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿ ಆನ್ಲೈನ್ ಹಾಗೂ ಪಾಸ್ ಬುಕ್ಕಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಹಾಗೂ ಕಾಮಗಾರಿಗಳ ಅನುಸಾರವಾಗಿ ಪೇಮೆಂಟ್ ಪ್ರೊಸಸ್ ಮಾಡಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA)
ಜಿಪಂ ಸಿಇಒ ರಾಹುಲ್ ಶಿಂಧರ ರವರು ಮಾತನಾಡಿ ಮಾನವ ದಿನ ಸೃಜನೆಯಲ್ಲಿ ಡಿಸೆಂಬರ ಅಂತ್ಯದವರೆಗೆ ಎಲ್ಲ ತಾಲೂಕುಗಳು ಶೇ.85% ರಷ್ಟು ಪ್ರಗತಿ ಸಾಧಿಸುವುದು, 2021-22 ರಿಂದ 2023-24 ರ ವರೆಗೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವುದು. ಮುಂದುವರೆದು ಬೆಳಗಾವಿಯ ಜಿಲ್ಲೆಯ ಆದ್ಯತೆ ಕಾಮಗಾರಿಗಳಾದ ಶಾಲಾ ಕಂಪೌಂಡ, ಅಡುಗೆ ಕೋಣೆ ಶೌಚಾಲಯ, ಆಟದ ಮೈದಾನ, ಗ್ರಾಮ ಪಂಚಾಯತಿ ಕಟ್ಟಡ ಹಾಗೂ ತ್ಯಾಜ್ಯ ನಿರ್ವಹಣಾ ಘಟಕಗಳ(SWM) ಪ್ರಗತಿಯನ್ನು ಆದ್ಯತೆ ಮೇಲೆ ಪ್ರಗತಿ ಸಾದಿಸುವುದು, ಒಂಬಡ್ಸಮೆನ್ ಪ್ರಕರಣಗಳ ಮೇಲೆ ವಸೂಲಾತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಸಾಧಿಸುವುದು,
ಸಾಮಾಜಿಕ ಲೆಕ್ಕ ಪರಿಶೋದನೆಯಲ್ಲಿ ಬಾಕಿ ಇರುವ 3240 ಕಂಡಿಕೆಗಳನ್ನು ಎಮ್ ಐ ಎಸ್ (MIS) ನಲ್ಲಿ ಎ ಟಿ ಆರ್(ATR) ಅಪ್ಲೋಡ್ ಮಾಡುವುದು.
ಜಿಲ್ಲೆಯ 2024-25ನೆ ಸಾಲಿಗೆ 36 ಗ್ರಾಮಗಳಲ್ಲಿ ಬೂದು ನಿರ್ವಹಣಾ ಘಟಕಗಳನ್ನು ಅನುಷ್ಟಾನಗೊಳಿಸಲಾಗುವ ಕಾಮಗಾರಿಗಳಿಗೆ ಈಗಾಗಲೇ ಟೆಂಡರ ಪ್ರಕ್ರಿಯೆ ಜರುಗಿಸಲಾಗಿದ್ದು, ಶೀಘ್ರವಾಗಿ ಕಾಮಗಾರಿಗಳನ್ನು ಪ್ರಾರಂಭಿಸುವುದು, ಸವಳು ಜವಳು ಕಾರ್ಯಕ್ರಮದಡಿ ಆಯ್ದ 21 ಗ್ರಾಮಗಳ ಕಾಮಗಾರಿಗಳಿಗೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದ್ದು, ಟೆಂಡರ ಪ್ರಕ್ರಿಯೆಗಳ ಮೂಲಕ ಕಾಮಗಾರಿಗಳನ್ನು ಅನುಷ್ಟಾನಗೋಳಿಸುವುದು, ಪ್ರಾರಂಬಿಸದೇ ಇರುವ 26 ಕೂಸಿನ ಮನೆಗಳನ್ನು ಒಂದು ವಾರದ ಒಳಗಾಗಿ ಪ್ರಾರಂಬಿಸಿ ಈ ಕಾರ್ಯಾಲಯಕ್ಕೆ ವರದಿ ಸಲ್ಲಿಸುವುದು.
ಸನ್ 2025-26ನೇ ಸಾಲಿನಲ್ಲಿ ಆನ್ ಲೈನ್ ಮೂಲಕ ಕಾಮಗಾರಿಗಳನ್ನು ಎಂಟ್ರಿ ಮಾಡುವುದು (ಸಾರ್ವಜನಿಕರು, ಗ್ರಾಮ ಪಂಚಾಯತ ಹಾಗೂ ಅನುಷ್ಟಾನ ಇಲಾಖೆ) ಇಲ್ಲಿಯವರೆಗೆ 47334 ಕಾಮಗಾರಿಗಳನ್ನು ಎಂಟ್ರಿ ಮಾಡಿದ್ದು, ಕಾಲ ಮಿತಿಯೋಳಗಾಗಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ಹಾಗೂ ಈಗಾಗಲೇ ಎಂಟ್ರಿ ಮಾಡಿದ ಸಮುದಾಯ ಕಾಮಗಾರಿಗಳಿಗೆ ಪೂರ್ವ ಅಳತೆ ದಾಖಲಿಸಲು ಮತ್ತು ಕಾಮಗಾರಿ ಸ್ಥಳ ಪರಿಶೀಲಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ತಾಂತ್ರಿಕ ಸಹಾಯಕರನ್ನು ನಿಯೋಜಿಸಿ, ಮೇಲ್ವಿಚಾರಣೆ ಮಾಡುವುದರೊಂದಿಗೆ ಪ್ರಗತಿ ಸಾಧಿಸಲು ಮಾನ್ಯರು ಜಿಲ್ಲೆಯ ಎಲ್ಲ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲ್ ಜೀವನ ಮಿಷನ್ ಯೋಜನೆ (JJM)
ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ ಜಲಜೀವನ ಮಿಷನ್ ಯೋಜನೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಅವುಗಳನ್ನು “ಹರ ಘರ ಜಲ್ ಗ್ರಾಮ ” ಎಂದು ಘೋಷಣೆ ಮಾಡಲು ಕ್ರಮವಹಿಸುವಂತೆ ಕಾರ್ಯಪಾಲಕ ಅಭಿಯಂತರರು/ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಎಲ್ಲ ತಾಲೂಕು ಮಟ್ಟದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಮುಂದುವರೆದು, ಜಲಜೀವನ ಮಿಷನ್ ಕಾಮಗಾರಿ ಪೂರ್ಣಗೊಂಡ ಗ್ರಾಮಗಳಲ್ಲಿ ಪ್ರತಿ ತಾಲೂಕಿನಿಂದ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಆ ಗ್ರಾಮವನ್ನು 24×7 ಕುಡಿಯುವ ನೀರು ಸರಬರಾಜು ಗ್ರಾಮವನ್ನಾಗಿ ಪರಿವರ್ತನೆ ಮಾಡಲು ಮಾನ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಅದರಂತೆ, ತಾಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ “ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ”ಯ ಸಭೆಯನ್ನು ಜರುಗಿಸಿ, ನಡುವಳಿಯ ಪ್ರತಿಯನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕು. ನಿಪ್ಪಾಣಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕಅಧಿಕಾರಿ ರವರಿಗೆ ಇತ್ತೀಚಿಗೆ ವರದಿಯಾದ ಕಸನಾಳ್ ಗ್ರಾಮದ ಕಲುಷಿತ ನೀರಿನ ಪ್ರಕರಣ ದ ಬಗ್ಗೆ ಸಂಬಂಧ ಪಟ್ಟವರ ಮೇಲೆ FIR ಧಾಖಲಾದ ಬಗ್ಗೆ ಖಾತ್ರಿ ಪಡಿಸಿ ಕೊಂಡರು. ಹಾಗೂ “ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ” ಹೆಸರಿನಲ್ಲಿ ಕಡ್ಡಾಯವಾಗಿ ಬ್ಯಾಂಕ ಖಾತೆಯನ್ನು ತುರ್ತಾಗಿ ಮಿಷನ್ ಮೋಡ್ ದಲ್ಲಿ ಕಾರ್ಯ ನಿರ್ವಹಿಸಿ ತೆರೆಯುವುದು, ಇಲ್ಲವಾದಲ್ಲಿ ತಮ್ಮ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾನ್ಯರು ಎಚ್ಚರಿಕೆ ನೀಡಿದರು.
ಪಂಚಮಿತ್ರ ಪೋರ್ಟಲ್ ಮೂಲಕ ಸ್ವೀಕೃತವಾದ IPGRS ದೂರಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಾರ್ಯಪಾಲಕ ಅಭಿಯಂತರರು ಬೆಳಗಾವಿ/ಚಿಕ್ಕೋಡಿ ವಿಭಾಗದವರಿಗೆ ಮಾನ್ಯರು ಸೂಚಿಸಿದರು.
ಸಭೆಯಲ್ಲಿ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಉಪಕಾರ್ಯದರ್ಶಿ(ಆಡಳಿತ) ಬಸವರಾಜ್ ಹೆಗ್ಗಾನಾಯಕ್, ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಮಠ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ್ ದುಡಗುಂಟಿ, ಪ್ರೋಬೆಷನರಿ ಐ.ಎ.ಎಸ್ ಅಧಿಕಾರಿ ದಿನೇಶಕುಮಾರ ಮೀನಾ, ಕಾರ್ಯನಿರ್ವಾಹಕ ಅಭಿಯಂತರರು ಶಶಿಕಾಂತ ನಾಯಕ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ವಿಭಾಗ ಬೆಳಗಾವಿ, ಕಾರ್ಯನಿರ್ವಾಹಕ ಅಭಿಯಂತರರು ಪಾಂಡುರಂಗರಾವ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ವಿಭಾಗ ಚಿಕ್ಕೋಡಿ, ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತರಾಜ್ ಇಲಾಖೆ, ಬೆಳಗಾವಿ/ಚಿಕ್ಕೋಡಿ, ಕಾರ್ಯನಿರ್ವಾಹಕ ಅಭಿಯಂತರರು, ಕೆ.ಆರ್.ಡಿ.ಎಲ್ ವಿಭಾಗ ಬೆಳಗಾವಿ/ಚಿಕ್ಕೋಡಿ, ಕಾರ್ಯನಿರ್ವಾಹಕ ಅಭಿಯಂತರರು, ಕೆ.ಆರ್.ಆರ್.ಡಿ.ಎ ವಿಭಾಗ ಬೆಳಗಾವಿ/ಚಿಕ್ಕೋಡಿ, ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಿನ ಎಲ್ಲ ಸಹಾಯಕ ನಿರ್ದೇಶಕರು(ಗ್ರಾ ಉ), ತಾಲೂಕಿನ ಎಲ್ಲ ಸಹಾಯಕ ನಿರ್ದೇಶಕರು(ಪಂ.ರಾಜ್) ಮುಂತಾದವರು ಹಾಜರಿದ್ದರು.