ಶಿಡ್ಲಘಟ್ಟ : –ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟ ನಡೆಸುವ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಬೇಕು’ ಎಂದು ಬಣ್ಣ ಮತ್ತು ಗಾರೆ ಕಾರ್ಮಿಕರ ಸಂಘದ ತಾಲೂಕು ಉಪಾಧ್ಯಕ್ಷ ನಟರಾಜ್ ಎ ಹೇಳಿದರು.
ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಣ್ಣ ಮತ್ತು ಗಾರೆ ಕಾರ್ಮಿಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರು ಎ ಮುನಿರಾಜು, ಮಾತನಾಡಿದ ಅವರು,‘ಜಾಗತೀಕರಣ, ಕಾರ್ಪೊರೇಟ್ ವ್ಯವಸ್ಥೆಯಿಂದ ಮತ್ತು ಸರ್ಕಾರಗಳ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳಿಂದ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ’ ಎಂದು ಆರೋಪಿಸಿದರು.
ಒಗ್ಗಟ್ಟಿನಿ ಹೋರಾಟ ಮೂಲಕ ಹಕ್ಕುಗಳನ್ನು ಪಡೆಯಬೇಕು ; ಪ್ರಧಾನ ಕಾರ್ಯದರ್ಶಿ ಪಿ ಬಾಬು,ನಂತರ ತಾಲೂಕು ಅಧ್ಯಕ್ಷ ವೆಂಕಟರವಣಪ್ಪ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷ ಗತಿಸಿದರೂ ಕಾರ್ಮಿಕರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ ಎಂದು ದೂರಿದರು.
ಖಜಾಂಚಿ ಟಿ ಸುಬ್ರಮಣಿ, ಮಾತನಾಡಿ ಕಾರ್ಮಿಕರು, ರೈತರು, ಬಡವರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಸರಕಾರಗಳು ನಂತರದ ದಿನಗಳಲ್ಲಿ ಎಲ್ಲರನ್ನೂ ಮರೆತು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಇಂತಹ ಧೋರಣೆ ವಿರುದ್ಧ ಕಾರ್ಮಿಕರು ಹೋರಾಟ ನಡೆಸಲು ಸಜ್ಜಾಗಬೇಕಿದೆ. ಕಾರ್ಮಿಕರಿಗೆ ಕಾಯಂ ಎನ್ನುವುದು ಕನಸಾಗಿದೆ. ಬೇಕಾ ಬಿಟ್ಟಿ ದುಡಿಸಿಕೊಳ್ಳುತ್ತಿದ್ದರೂ ಕಾರ್ಮಿಕರ ಪರವಾಗಿ ನಿಲ್ಲಲು ಕಾರ್ಮಿಕ ಇಲಾಖೆ ವಿಫಲವಾಗಿವೆ ಎಂದು ಅಪಾದಿಸಿದರು.
ಈ ಸಂಧರ್ಭದಲ್ಲಿ ಬಣ್ಣ ಮತ್ತು ಗಾರೆ ಕಾರ್ಮಿಕರ ಸಂಘದ ಸಹ ಕಾರ್ಯದರ್ಶಿ ನಾರಾಯಣಸ್ವಾಮಿ ಜಿ ಎಮ್,ಸಂಚಾಲಕರು ನಾರಾಯಣಸ್ವಾಮಿ ಕೆ ಎಮ್.ಸಹ ಸಂಚಾಲಕರು ಬಾಬು ಕೆ,ಖಜಾಂಚಿ ಟಿ ಎಮ್ ಸುಬ್ರಮಣಿ,ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಮಂಜುನಾಥ್ ಕೆ ವಿ ನಾರಾಯಣಸ್ವಾಮಿ, ಬಿ,ಮಕೇಶ್,ಶಿವಣ್ಣ,ಶ್ರೀನಿವಾಸ್,ತಿರುಮಾಲೇಶ್,ಇತರರು ಹಾಜರಿದ್ದರು.
ವರದಿ:ಯಾರಬ್. ಎಂ.