ಜೋಯಿಡಾ : ಜೋಯಿಡಾ ಕನ್ನಡ ಸಾಹಿತ್ಯ ಪರಿಷತ್ತು, ಮನಾಯಿ ಗೌಳಿವಾಡಾದಂತ ಹಿಂದುಳಿದ ಪ್ರದೇಶದಲ್ಲಿಯೂ ಇಲ್ಲಿನ ಜನರಿಗೆ ಕನ್ನಡ ಭಾಷೆ, ನಾಡು, ನುಡಿಯ ಬಗ್ಗೆ ಅರಿವು ಮೂಡಿಸುವ ಸುಂದರ, ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಕೆ. ಡಿ. ಸಿ. ಸಿ. ಬ್ಯಾಂಕ್ ಶಿರಸಿ ನಿರ್ದೇಶಕರಾದ ಕೃಷ್ಣಾ ದೇಸಾಯಿ ಹೇಳಿದರು.
ಅವರು ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಮನಾಯಿ ಗೌಳಿವಾಡಾ ಕಿ. ಪ್ರಾ. ಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ,, ಕ. ಸಾ. ಪ ಜೋಯಿಡಾ ಘಟಕ ಹಾಗೂ ಮನಾಯಿ ಗೌಳಿವಾಡಾ ಶಾಲೆಯ ಸಹಯೋಗದಲ್ಲಿ ಕನ್ನಡ ಕಾರ್ತಿಕ ಅನುದಿನ ಅನುಸ್ಫಂದನ ಅಡಿಯಲ್ಲಿ ನಡೆದ ಕವನ ವಾಚನ, ಗೀತ ಗಾಯನ ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇನ್ನೊರ್ವ ಅತಿಥಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಸುರೇಶ ಉಮ್ಮನ್ನನವರ ಮಾತನಾಡಿ, ಪರಿಷತ್ತು ನಮ್ಮ ಪಂಚಾಯತಿ ವ್ಯಾಪ್ತಿಯ ಅತಿ ಹಿಂದುಳಿದ ಪ್ರದೇಶದಲ್ಲಿ ಕನ್ನಡ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ಥಳಿಯರಲ್ಲಿ ಹಾಗೂ ಶಾಲಾ ಮಕ್ಕಳಲ್ಲಿ ಆಡಳಿತ ಭಾಷೆ ಕನ್ನಡದ ಅಗತ್ಯ, ಬದುಕಿನ ಭಾಷೆಯಾಗಿ ಕನ್ನಡದ ಅನಿವಾರ್ಯತೆ ಕುರಿತು ಉತ್ತಮ ಸಂದೇಶ ನೀಡುವ ಕೆಲಶಕ್ಕೆ ನಮ್ಮ ಗ್ರಾ. ಪಂ. ಪರವಾಗಿ ಅಭಿನಂದಿಸುತ್ತಿದ್ದಾಗಿ ತಿಳಿಸಿದರು.

ಉಪನ್ಯಾಸ ನೀಡಿದ ಶಿಕ್ಷಣ ಇಲಾಖೆಯ ಸಿ. ಆರ್. ಪಿ. ವಿಶಾಲಾಕ್ಷಿ ನಾಯ್ಕ ಮಾತನಾಡುತ್ತಾ, ಅನ್ನ ಕೊಡುವ ಭಾಷೆ ಕನ್ನಡ, ಇದರಡಿಯಲ್ಲಿ ಬದುಕು ಕಟ್ಟಿ ಕೊಳ್ಳುವ ನಾವುಗಳು, ಕನ್ನಡ ನಾಡು, ನುಡಿ ಬಗ್ಗೆ ಅಭಿಮಾನ ತೋರಬೇಕಿದೆ. ಮಕ್ಕಲ್ಲಿ ಈಗಲೇ ಪ್ರೀತಿ ಜಾಗೃತವಾದರೆ ಮುಂದಿನ ದಿನದಲ್ಲಿ ನಮ್ಮ ನಾಡು, ಭಾಷೆ ಸಂಮೃದ್ದವಾಗಿ ಬೆಳೆಯಲು ಸಾಧ್ಯ ಎಂದರು.
ಕಾರ್ಯಕ್ರಮವನ್ನು ಗ್ರಾ. ಪಂ. ಅಧ್ಯಕ್ಷ ಶಾಂತಾರಾಮ ಮಾಹೇಕರ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಪಾಂಡುರಂಗ ಪಟಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಶಾಲೆ, ಗ್ರಾಮಸ್ಥರಲ್ಲಿಯೂ ಕನ್ನಡ ಜಾಗೃತಿ ಮೂಡಿಸುವುದು ನಮ್ಮ ಆಶಯವಾಗಿದ್ದು, ಮಾನಾಯಿ ಗೌಳಿವಾಡಾ ಹಾಗೂ ಸುತ್ತಲ ಗ್ರಾಮಸ್ಥರು ಪರಿಷತ್ತಿನ ಕಾರ್ಯಕ್ರಮಕ್ಕೆ ಸ್ಪಂದಿಸಿ ಆಗಮಿಸಿ, ಪಾಲ್ಗೊಂಡಿರುವುದಕ್ಕೆ ಕೃತಜ್ಞತೆ ಸಲ್ಲಿಸುತಿದ್ದಾಗಿ ಹೇಳಿದರು.
ಶಾಲಾ ಮಕ್ಕಳು, ಸ್ಥಳಿಯ ಯುವಕ, ಯುವತಿಯ ಜೊತೆ ಪಾಲಕರೂ ಕೂಡಾ ಕಾವ್ಯ ವಾಚನ,, ಕಾವ್ಯ ಗಾಯನ ಹಾಗೂ ಗೀತ ನೃತ್ಯ ಕಾರ್ಯಕಮ ಹಾಗೂ ರಂಗೋಲಿ, ಸಂಗೀತ ಕುರ್ಚಿ ಮತ್ತು ಚುಕ್ಕೆ ಗುರುತಿನ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೋಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಮಾನಾಯಿ ಗೌಳಿವಾಡಾ, ಮಾನಾಯಿ, ಚಾವರ್ಲಿ ಶಾಲೆಗಳ ಒಟ್ಟೂ 50 ಕ್ಕು ಹೆಚ್ಚು ಶಾಲಾ ಮಕ್ಕಳು ನೃತ್ಯ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದರೆ, ಸಂಗೀತ ಕುರ್ಚಿ, ಚುಕ್ಕೆ ಗುರುತಿನ ಸ್ಪರ್ಧೆ, ರಂಗೋಲಿಯಲ್ಲಿ ಯುವಕ ಯುವತಿಯರು, ಪಾಲಕರು ಪಾಲ್ಗೋಂಡಿದರು. ಎಲ್ಲರಿಗೂ ಕನ್ನಡ ಶಾಲು, ಪಟ್ಟಿ ಪೆನ್ನಿನ ಜೊತೆ, ಪ್ಲೇಟಗಳನ್ನು ಗ್ರಾ. ಪಂ. ಪ್ರಧಾನಿ ವತಿಯಿಂದ ನೀಡಲಾಯಿತು. ಲೇಖನಿ ಸಾಮಗ್ರಿಗಳನ್ನು ವಿಶೇಷ ಭಹುಮಾನದ ರೂಪದಲ್ಲಿ ಊರ ಪ್ರಮುಖರಾದ ಅಂಕುಶ ಬಾಂದೇಕರ ಪ್ರಾಯೋಜಿಸಿದ್ದರು. ಯುವಕ, ಯುವತಿಯರು ಹಾಗೂ ಪಾಲಕರಿಗಾಗಿ ನಡೆದ ಸ್ಪರ್ಧೆಗೆ ಭಹುಮಾನವನ್ನು ಶಾಲಾ ಎಸ್. ಡಿ. ಎಮ್. ಸಿ. ಅಧ್ಯಕ್ಷ ಚಂದ್ರಕಾಂತ ರಿತ್ತಿ ಪ್ರಾಯೋಜಿಸಿದ್ದರು.
ವೇದಿಕೆಯಲ್ಲಿ ಗ್ರಾ. ಪಂ. ಸದಸ್ಯೆ ಚಿತ್ರಾ ರಿತ್ತಿ, ಪ್ರಮುಖರಾದ ಮೊಹನ ಮಾವಸ್ಕರ್, ಕುಣಬಿ ಸಮಾಜದ ಅಧ್ಯಕ್ಷ ಪ್ರೇಮಾನಂದ ವೇಳಿಪ, ಮರಾಠಾ ಸಮಾಜದ ಕಾರ್ಯದರ್ಶಿ ದೇವಿದಾಸ ದೇಸಾಯಿ, ದೂಳು ಘಾರೆ, ಚಂದ್ರಕಾಂತ ರಿತ್ತಿ, ಅಂಕುಶ ಬಾಂದೇಕರ, ಮುಂತಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಶಬ್ಬೀರ ದೇವಲ್ಲಿ ಸ್ವಾಗತಿಸಿದರೆ, ಹುಮೇರಾ ದೇವಲ್ಲಿ ನಿರೂಪಿಸಿದರು.




