ಕುಷ್ಟಗಿ : ನಮ್ಮ ದೇಶದ ಸಂಸ್ಕೃತಿ ಬೇರೆ ದೇಶಗಳಲ್ಲಿ ಕಾಣಲು ಸಿಗದು. ಇದನ್ನು ನೋಡಿದಾಗ ನಾವೇ ಧನ್ಯವಂತರು,” ಎಂದು ಕುದರಿಮೋತಿ ವಿಜಯ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಕರಿಸಿದ್ದೇಶ್ವರ ಮಠದಲ್ಲಿ ಜಾತ್ರೆ ನಿಮಿತ್ತ ಮಂಗಳವಾರ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. “ಮಾತೃ ಸ್ವರೂಪಕ್ಕಿಂತ ಮಿಗಿಲಾದ ಸ್ಥಾನ ಇನ್ನೊಂದಿಲ್ಲ, ತಾಯಂದಿರು ದೇಶದ ಸಂಸ್ಕೃತಿ, ಆಚಾರ ವಿಚಾರಗಳನು ಸರಿಯಾಗಿ ತಿಳಿದುಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಎಂದರು.
ಶಿವಕುಮಾರ ದೇವರು ಹಿರೇಮಠ, ಮುಖಂಡರಾದ ಕರಿಸಿದ್ದಪ್ಪ ಕುಷ್ಟಗಿ, ಅಂದಾನಯ್ಯ ಸೊಪ್ಪಿಮಠ, ಚಂದಪ್ಪ ಅಗಸಿಮುಂದಿನ, ಬಸವರಾಜ ಹಳ್ಳೂರ, ರಾಚಪ್ಪ ಚಿನಿವಾಲರ, ವಿಶ್ವನಾಥ ಕನ್ನೂರ, ಶೇಖಪ್ಪ ದೋಟಿಹಾಳ, ಪ್ರಶಾಂತ ಗಡಾದ ಮಹಾಂತೇಶ ಅಗಸಿಮುಂದಿನ, ಮಲ್ಲಯ್ಯ ಕೋಮಾರಿ, ಸಿದ್ರಾಮಯ್ಯ ಕರಕಂಟಿ,ಬಸವರಾಜ ಚಿನಿವಾಲರ ಹಾಗೂ ಪತ್ರಿಕಟ್ಟಿ ಬಸವೇಶ್ವರ ಯುವಕ ಸಂಘದವರು ಇದ್ದರು.
ವರದಿ : ಶಿವಕುಮಾರ ಕೆಂಭಾವಿಹಿರೇಮಠ




