ಕಾಳಗಿ :ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಿಗಿ ಕ್ರಾಸ್ ಬಳಿ ಇರುವ ಸಮಾನತೆಯ ಕ್ರಾಂತಿ ಪುರುಷ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿ ಭಗ್ನ ಗೋಳಿಸಿರುವ, ಕಿಡಿಗೇಡಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಜೇವರ್ಗಿ ಪಟ್ಟಣದ ಅಪ್ರಪ್ತ ಬಾಲಕಿ ಸಾವಿಗೆ ನ್ಯಾಯ ನೀಡುವಂತೆ ಆಗ್ರಹಿಸಿ
ಇಂದು ಕಾಳಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ವರೆಗೆ ತಾಲೂಕು ಮಠಾಧೀಶರ ನೇತೃತ್ವದಲ್ಲಿ ಬೃಹತ್ ಹೋರಾಟ ಮೂಲಕ ಕಾಳಗಿ ತಾಲೂಕ ಬಂದ್ ಮಾಡಲಾಯಿತು.

ಈ ಹೋರಾಟದಲ್ಲಿ ಅನೇಕರು ಮಾತನಾಡಿದರು ನಂತರ ತಹಸೀಲ್ದಾರ್ ಕಾಳಗಿಯವರಿಗೆ ಮನವಿ ಪತ್ರ ನೀಡಲಾಯಿತು, ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ನಾಯಕರು ಮತ್ತು ಕಾಳಗಿ ತಾಲೂಕಿನ ಎಲ್ಲಾ ಗ್ರಾಮದ ಗ್ರಾಮಸ್ಥರು ಹಾಗೂ ಬಸವ ಅಭಿಮಾನಿಗಳು ಈ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ವರದಿ : ಹಣಮಂತ ಕುಡಹಳ್ಳಿ




