Ad imageAd image

ಸವದತ್ತಿ ಯಲ್ಲಮ್ಮ ದೇವಸ್ಥಾನದ ರೂ.3 ಕೋಟಿಗೂ ಅಧಿಕ ದಾಖಲೆಯ ಕಾಣಿಕೆ ಸಂಗ್ರಹ

Bharath Vaibhav
ಸವದತ್ತಿ ಯಲ್ಲಮ್ಮ ದೇವಸ್ಥಾನದ ರೂ.3 ಕೋಟಿಗೂ ಅಧಿಕ ದಾಖಲೆಯ ಕಾಣಿಕೆ ಸಂಗ್ರಹ
WhatsApp Group Join Now
Telegram Group Join Now

ಬೆಳಗಾವಿ : ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಶಕ್ತಿ ಕೇಂದ್ರವಾಗಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಮೂರು ತಿಂಗಳಲ್ಲಿ ರೂ.3 ಕೋಟಿಗೂ ಅಧಿಕ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ.

ನಿನ್ನೆ ದೇಗುಲ ಗುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ.ಈ ಸಲ ರೂ.3.68 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಪ್ರತಿ ಬಾರಿ ಎಣಿಕೆ ಮಾಡಿದಾಗ ರೂ.1 ರಿಂದ 1.5 ಕೋಟಿವರೆಗೆ ಕಾಣಿಕೆ ಸಂಗ್ರಹವಾಗುತಿತ್ತು. ಆದರೆ, ಈ ಬಾರಿ ಮೂರೂವರೆ ಕೋಟಿಗೂ ಅಧಿಕ ಹಣ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

ಕಳೆದ ವರ್ಷ ಡಿ.14ರಿಂದ 2025ರ ಮಾ.12ರವರೆಗೆ ಯಲ್ಲಮ್ಮ ದೇವಸ್ಥಾನ & ಇತರೆ ಪರಿವಾರದ ದೇವಸ್ಥಾನಗಳ ಹುಂಡಿಗಳಲ್ಲಿ ರೂ.3.40 ಕೋಟಿ ನಗದು ಸಂಗ್ರಹವಾಗಿದೆ.

ರೂ.6.39 ಲಕ್ಷ ಮೌಲ್ಯದ ಬೆಳ್ಳಿ ಆಭರಣ, ರೂ.20.82 ಲಕ್ಷ ಮೌಲ್ಯದ ಚಿನ್ನಾಭರಣ ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ. ಇದಲ್ಲದೇ ಹುಂಡಿಯಲ್ಲಿ ಭಾರತ ಮಾತ್ರವಲ್ಲ ಅಮೆರಿಕ, ನೆದರ್ಲೆಂಡ್ಸ್ ಸೇರಿ ಇತರ ದೇಶಗಳ ಕರೆನ್ಸಿಗಳನ್ನು ಭಕ್ತರು ಹಾಕಿರುವುದು ಲಭ್ಯವಾಗಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!