ಸೇಡಂ:- ಕರ್ನಾಟಕ ರಾಜ್ಯದಲ್ಲಿ ನಾವುಗಳು ಸುಮಾರು ೫-೬ ವರ್ಷಗಳಿಂದ ಸಮೀಕ್ಷೆದಾರರೆಂದು ಸೇವೆಸಲ್ಲಿಸುತ್ತಾ ಬಂದಿರುತ್ತಿದ್ದೇವೆ.
ನಾವು ಸೇವೆ ಸಲ್ಲಿಸುತ್ತಿರುವಾಗ ಹೊಲದಲ್ಲಿ ಹಾವು, ಚೇಳು ಕಚ್ಚಿರುತ್ತವೆ ಹಾಗೂ ಕಾಡು ಹಂದಿಗಳು, ತೊಳಗಳ ದಾಳಿಯಿಂದ ಗಾಯಗೊಂಡಿರುತ್ತೇವೆ, ಮತ್ತು ಹೆಜ್ಜೇನುಗಳು ದಾಳಿ ಮಾಡಿರುತ್ತವೆ.
ಹಿಂದೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಹಾಗೂ ಕೊಡ್ಲಾ ಎಂಬ ಗ್ರಾಮದಲ್ಲಿ ನಮ್ಮ ಇಬ್ಬರು ಬೆಳೆ ಸಮೀಕ್ಷೆದಾರರಿಗೆ ಹಾವು ಕಚ್ಚಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದರು ಪರಿಹಾರ ನೀಡಿರುವುದಿಲ್ಲ ಎಂದು ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ರಾಜ್ಯಾಧ್ಯಕ್ಷರಾದ ಮಧುಚಂದ್ರ ಎಂ. ಮಹಾದೇವಯ್ಯ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಡಿಫಿರೆಂಟ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ ಕರ್ನಾಟಕ ರಾಜ್ಯದ ಪಿ,ಆರ್ ಸಮೀಕ್ಷೆದಾರರಿಗೆ ಸೇವಾ ಭದ್ರತೆ ಹಾಗೂ ಜೀವ ವಿಮೆ ಒದಗಿಸುವಂತೆ ಮತ್ತು ಖಾಯಂಗೊಳಿಸುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಪಿ.ರಾಜು ಡಿಫಿರೆಂಟ್ ಮಾತನಾಡಿ ನಾವುಗಳು ಜೀವದ ಆಸೆ ಬಿಟ್ಟು ಶ್ರದ್ದೆಯಿಂದ ಸೇವೆ ಮಾಡುತ್ತಿದ್ದೇವೆ.
ಸಮೀಕ್ಷೆ ಮಾಡುವಾಗ ಕೆಲವು ರೈತರು ನೀವು ಯಾರೆಂದು ಪ್ರಶ್ನೆ ಮಾಡುತ್ತಾರೆ. ಕೆಲವೊಮ್ಮೆ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ.
ಅದ ಕಾರಣ ನಮಗೆ ದಿನಗೂಲಿ ಆದಾರದ ಮೇಲೆ ದಿನಾಲೂ ಕೆಲಸ ನೀಡಬೇಕು ಹಾಗೂ ಜೀವ ವಿಮೆ ಒದಗಿಸಬೇಕು ಮತ್ತು ಎಲ್ಲಾ ಪಿ,ಆರ್ ಬೆಳೆ ಸಮೀಕ್ಷೆದಾರರಿಗೆ ರೈನ್ ಕೋಟ್ ನೀಡಬೇಕು ಹಾಗೂ ಗುರುತಿನ ಚೀಟಿ, ಶೂ ನೀಡಬೇಕು ಎಂದು ರಾಜು ಹೇಳಿದರು.
ಈ ಸಂದರ್ಭದಲ್ಲಿ ಬೆಳೆ ಸಮೀಕ್ಷೆದಾರರ ಸಂಘದ ರಾಜ್ಯಾಧ್ಯಕ್ಷರಾದ ಮಧುಚಂದ್ರ ಎಂ ಮಹಾದೇವಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜು ಡಿಫರೆಂಟ್, ಆಂಜನೇಯ,ಸುಂದರ ರಾಜಪ್ಪ, ಪಿಂಟು ಧನ್ಸಿಂಗ್ ಚವ್ಹಾಣ,ಶಿವುಕುಮಾರ,ಪ್ರಕಾಶ್, ರಾಮಕೃಷ್ಣ ಸಿಲಾರಕೂಟ್, ನರಸಪ್ಪ, ಎಂ,ಡಿ, ಮುಸ್ತಾಫ, ಮೈನೋದ್ಧಿನ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್.