ಇಲಕಲ್ : ಮಾನ್ಯರೇ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಇಲಕಲ್ಲ ನಗರದ ವೃತ್ತಿನಿರತ ಪರ್ತಕರ್ತರು ಹಗಲು ರಾತ್ರಿ ಶ್ರಮಿಸಿ ಜನರಿಗೆ ಸುದ್ದಿ ಮಾದ್ಯಮಗಳ ಮೂಲಕ ಸುದ್ದಿಗಳನ್ನು ತಿಳಿಸುವುದಷ್ಟೇ ಅಲ್ಲದೇ ನಗರಸಭೆಯ ಶ್ರೇಯೋಭಿವೃದ್ದಿಗೂ ಶ್ರಮಿಸಿರುತ್ತಾರೆ. ಆದರೆ ವೃತ್ತಿನಿರತ ಪರ್ತಕರ್ತರು ಹಲವು ವರ್ಷಗಳಿಂದ ಜಾಹಿರಾತುಗಳ ಕೊರತೆ ಮತ್ತು ಪ್ರಸರಣಾ ವೆಚ್ಚ ಭರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ.
ತಮ್ಮ ಜೀವದ ಹಂಗು ತೊರೆದ ಸಮಾಜದ ಓರೆ ಕೋರೆಗಳನ್ನು ತಿದ್ದಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಾ ಬಂದಿರುತ್ತಾರೆ. ಆದರೆ ವೃತ್ತಿ ನಿರತ ಪರ್ತಕರ್ತರು ಮತ್ತು ಅವರ ಕುಟುಂಬದವರು ಅಕಾಲಿಕ ಆರೋಗ್ಯ ಸಮಸ್ಯೆಯಿಂದ ಬಳಲಿದರೆ ಇಂದಿನ ದುಬಾರಿ ಕಾಲದಲ್ಲಿ ಆಸ್ಪತ್ರೆಯ ಬಿಲ್ ಪಾವತಿಸಲೂ ಆಗದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕರ್ನಾಟಕ ರಾಜ್ಯದ ಹಲವು ಬೃಹತ್ ಮಹಾನಗರ ಪಾಲಿಕೆಗಳು, ಮಹಾನಗರ ಪಾಲಿಕೆಗಳಿ, ನಗರಸಭೆ, ಪುರಸಭೆ ಸೇರಿದಂತೆ ಸ್ಥಳಿಯ ಸಂಸ್ಥೆಗಳಲ್ಲಿ ಇಂತಹ ವೃತ್ತಿನಿರತ ಪರ್ತಕರ್ತರ ಆರೋಗ್ಯದ ಹಿತಿದೃಷ್ಠಿಯಿಂದ ಆರೋಗ್ಯ ನಿಧಿಗಾಗ ಹಣ ಮೀಸಲಿಟ್ಟಿದ್ದು ಗಮನಿಸಬಹುದು.
ಕಾರಣ ಇಲಕಲ್ಲ ನಗರಸಭೆ ವತಿಯಿಂದ ವಾರ್ಷಿಕ ಕನಿಷ್ಠ 10 ಲಕ್ಷ ರೂಪಾಯಿಗಳನ್ನು ಇಲಕಲ್ಲ ನಗರದ ವೃತ್ತಿನಿರತ ಪರ್ತಕರ್ತರಿಗಾಗಿ ಕಾಯ್ದಿರಿಸಿ. ಪರ್ತಕರ್ತರು ಮತ್ತು ಅವರ ಕುಟುಂಬದವರು ಆರೋಗ್ಯ ಸಮಸ್ಯೆಯಿಂದ ಬಳಲಿದರೆ ಈ ಆರೋಗ್ಯ ನಿಧಿಯಿಂದ ಅವರಿಗೆ ಆರ್ಥಿಕ ಸಹಾಯ ಮಾಡಬಹುದಾಗಿದೆ. ಈ ಹಿಂದೆ ಅನೇಕ ಬಾರಿ ನಗರಸಭೆಗೆ ಪರ್ತಕರ್ತರು ಮತ್ತು ಹಲವು ಸಂಘಟನೆಗಳು ಮನವಿ ಮಾಡಿದ್ದರೂ ಯಾರೋಬ್ಬರೂ ಕನಿಷ್ಟ ಚರ್ಚೆಗೂ ಈ ವಿಷಯವನ್ನು ಪರಿಗಣಿಸಿರುವುದಿಲ್ಲ. ಕಾರಣ ದಯಾಳುಗಳಾದ ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಾಳೆ ನಡೆಯಲಿರುವ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ವೃತ್ತಿ ನಿರತ ಪರ್ತಕರ್ತರಿಗೆ ಆರೋಗ್ಯ ನಿಧಿ ಸ್ಥಾಪಿಸಲು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ.
ವರದಿ : ದಾವಲ್. ಶೇಡಂ