Ad imageAd image

ಪತ್ರಕರ್ತರ ಭವನ ನಿರ್ಮಿಸುವಂತೆ ಚಿಕ್ಕೋಡಿ ಎಸಿ ಭವನದಲ್ಲಿ ಮನವಿ

Bharath Vaibhav
ಪತ್ರಕರ್ತರ ಭವನ ನಿರ್ಮಿಸುವಂತೆ ಚಿಕ್ಕೋಡಿ ಎಸಿ ಭವನದಲ್ಲಿ ಮನವಿ
WhatsApp Group Join Now
Telegram Group Join Now

ಚಿಕ್ಕೋಡಿ:- ಪತ್ರಕರ್ತರಿಗಾಗಿ ಕೆಲವು ಅನುಕೂಲಗಳ ದೃಷ್ಟಿಯಿಂದ ಯಾವುದೆ ಭವನವಿಲ್ಲ ಆದ್ದರಿಂದ ಪತ್ರಕರ್ತರಿಗೆ ಭವನದ ಬೇಡಿಕೆಯಾಗಿದೆ ಆದ್ದರಿಂದ ಇವತ್ತು ಮಾನ್ಯ ಶ್ರೀ ಶಾಸಕರಾದ ಗಣೇಶ್ ಹುಕ್ಕೇರಿ ಹಾಗೂ ಉಪ ವಿಭಾಗ ಅಧಿಕಾರಿಯಾದ ಶ್ರೀ ಸಂಪಗಾವಿ ಸರ್ ಚಿಕ್ಕೋಡಿ ತಹಸಿಲ್ದಾರರಾದ ಶ್ರೀ ಕುಲಕರ್ಣಿ ಸರ್ ಹಾಗೂ ಗಂಧ ಸರ್ ಅವರಿಗೆ ಮನವಿ ಮಾಡಲಾಯಿತು.

ಇನ್ನು ಎರಡನೆಯದು ಸದಲಗಾ ಪಟ್ಟಣದಲ್ಲಿ ಇರುವಂತ ಹೊಸ ಬಸ್ ನಿಲ್ದಾಣ ಹತ್ತಿರ ವ್ಯಾಪಾರ ಮಳಿಗೆ ಕಾಂಪ್ಲೆಕ್ಸದಲ್ಲಿ ಪತ್ರಕರ್ತರಿಗೆ ಒಂದು ಸರ್ಕಾರಿ ಮಳಿಗೆಯನ್ನು ಉಪಯೋಗಿಸಿಕೊಳ್ಳಲು ಸದಲಗಾ ಪಟ್ಟಣದ ಪತ್ರಕರ್ತರಿಂದ ಮನವಿ ಮಾಡಲಾಯಿತು

ಮತ್ತು ಮುರ್ನೆಯದಾಗಿ ,ಸದಲಗಾ ಪಟ್ಟಣದಲ್ಲಿ ಈಗಿರುವ ಸ್ಥಳದಲ್ಲಿ ಕಡಿಮೆ ಜಾಗ ಇರುವುದರಿಂದ ಸಾರ್ವಜನಿಕ ಧ್ವಜಾರೋಹಣವನ್ನು ಕುವೆಂಪು ಶಾಲೆಯ ಮೈದಾನದ ಆವರಣದಲ್ಲಿ ಮಾಡುವ ಕುರಿತು ಮನವಿಯನ್ನು ಕೂಡ ಮಾಡಲಾಯಿತು.

ಈ ಸಂದರ್ಭದಲ್ಲಿ ಅಣ್ಣಾಸಾಹೇಬ್ ಕದಮ ಶ್ರೀ ರಾಜು ಮಂಡೆ ಹಾಗೂ ಕೈಲಾಶ ಮಾಳಗೆ ಇನ್ನಿತರ ಸದಸ್ಯರ ಉಪಸ್ಥಿತಿಯಲ್ಲಿ ಈ ಮೂರು ಮನವಿಯನ್ನು ನೀಡಲಾಯಿತು.ಈಗಾಗಲೇ ಹಲವು ಸಲ ಮನವಿ ಮಾಡಲಾಗಿತ್ತು ಆದರೆ ಈ ಸಲ ಶಾಸಕರು ಈ ಕೆಲಸವನ್ನು ಆದಷ್ಟು ಬೇಗ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವರದಿ :-ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!