ಸೇಡಂ: ಬಹುಜನ ಸಮಾಜ ಪಕ್ಷ ಸೇಡಂ ವಿಧಾನ ಸಭೆ ವತಿಯಿಂದ ಚಿಂಚೋಳಿ ತಾಲೂಕಿನ ಬೇನಕನಹಳ್ಳಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಮಾಡಿ ಬೆನಕನಹಳ್ಳಿ ಗ್ರಾಮದ ವಿದ್ಯಾರ್ಥಿಗಳಿಗೆ ಹಾಗೂ ವಯಸ್ಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬೆನಕನಹಳ್ಳಿ ಗ್ರಾಮಸ್ಥರ ಪರವಾಗಿ ಬಹುಜನ ಸಮಾಜ ಪಕ್ಷ ಸೇಡಂ ತಾಲೂಕ ಅಧ್ಯಕ್ಷರಾದ ರೇವಣ ಸಿದ್ಧ ಎಸ್ ಶಿಂದೆ ಅವರ ನೇತೃತ್ವದಲ್ಲಿ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೇಡಂ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ರೇವಣಸಿದ್ದಪ್ಪ. ಎಸ್. ಸಿಂಧೆ, ಸುಲೇಪೆಟ್ ಹೋಬಳಿ ಅಧ್ಯಕ್ಷ ರಾಹುಲ್ ಯಾಕಪುರ, ಲಾಲಪ್ಪಾ ಬೆನಕನಹಳ್ಳಿ ಹಾಜಪ್ಪ ಜಾಬಿನ, ಮಾರುತಿ, ರಮೇಶ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




