ಸೇಡಂ : ತಾಲೂಕು ಬಿಜೆಪಿ ಎಸ್, ಸಿ ಮೋರ್ಚಾ ಘಟಕ ವತಿಯಿಂದ ಯಾದಗಿರ ಜಿಲ್ಲೆಯ ವಡಗೇರಾ ತಾಲೂಕಿನ ನೋಡೆಲ್ ವಿಧಾನಪರಿಷತ್ ಸದಸ್ಯರು ಹಾಗೂ ವಿಧಾನಪರಿಷತ್ ವಿರೋಧಪಕ್ಷದ ನಾಯಕರಾದ ಚೆಲವಾದಿ ನಾರಾಯಣ ಸ್ವಾಮಿ ಅವರಿಗೆ ವೆಂಕಟೇಶ್ ಅಪ್ಪು ಎನ್ನುವ ವ್ಯಕ್ತಿ ಫೇಸ್ ಬುಕ್ ಐಡಿ ಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾರಕಾಸ್ತ್ರಗಳನ್ನು ತೋರಿಸುವ ಮೂಲಕ ಜೀವ ಬೆದರಿಕೆ ಹಾಕಿದ್ದು ಸಂವಿಧಾನಿಕ ಹುದ್ದೆಯಲ್ಲಿರುವ ದಲಿತ ನಾಯಕರುಗಳಿಗೆ ರಕ್ಷಣೆ ಇಲ್ಲದಂತಾಗಿದೆ.
ಇನ್ನೂ ಗ್ರಾಮೀಣ ಭಾಗದ ಜನರ ವ್ಯವಸ್ಥೆ ಹೇಳತೀರದು. ಪ್ರಯುಕ್ತ ಸದರಿ ವೆಂಕಟೇಶ್ ಅಪ್ಪು ಎನ್ನುವ ಇವರನ್ನು ಕೊಡಲೇ ಬಂಧಿಸಿ ಛಲವಾದಿ ನಾರಾಯಣ ಸ್ವಾಮಿಯವರಿಗೆ ಜೆಡ್+ ಭದ್ರತೆ ಒದಗಿಸಿಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಸೇಡಂ ಸಹಾಯಕ ಆಯುಕ್ತರ ಮುಖಾಂತರ ಬಿಜೆಪಿ ಎಸ್, ಸಿ ಮೋರ್ಚಾ ಅಧ್ಯಕ್ಷ ರಾಮು ಕಣೇಕಲ್ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಓಂಪ್ರಕಾಶ್ ತರನಳ್ಳಿ, ಸಿದ್ದು ಉಡಾಗಿ, ಮಹಾವೀರ್ ಅಳ್ಳೊಳ್ಳಿ, ಸಿದ್ದಲಿಂಗ ನಿಡಗುಂದಿ, ಹಣಮಂತ ಭರತನೂರ, ಅಶೋಕ್, ಮುರಳಿಕೃಷ್ಣ, ಉದಯ ಕುಮಾರ್, ಈಶ್ವರ, ರಾಜು, ಮಹೇಶ್, ನಾಗರಾಜ್, ಸುರೇಶ್, ಅನಂತಪ್ಪ, ರಾಜು ಕಟ್ಟಿ, ಮಹದೇವಪ್ಪ, ಸಾಯಿಕುಮಾರ್, ಮಲ್ಲಿಕಾರ್ಜುನ, ಅಶೋಕ್, ಪ್ರಸಾದ್, ರಾಘವೇಂದ್ರ, ಶ್ರೀಶೈಲ ಎಂಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




