Ad imageAd image

ಉಪವಿಭಾಗಕ್ಕೆ ಒಬ್ಬರು ಜಿಲ್ಲಾಧಿಕಾರಿಯವರನ್ನು ನೇಮಿಸಬೇಕೆಂದು ಸರಕಾರಕ್ಕೆ ಮನವಿ.

Bharath Vaibhav
ಉಪವಿಭಾಗಕ್ಕೆ ಒಬ್ಬರು ಜಿಲ್ಲಾಧಿಕಾರಿಯವರನ್ನು ನೇಮಿಸಬೇಕೆಂದು ಸರಕಾರಕ್ಕೆ ಮನವಿ.
WhatsApp Group Join Now
Telegram Group Join Now

ಚಿಕ್ಕೋಡಿ:-ಕರ್ನಾಟಕ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಗೆ ಒಬ್ಬರೇ ಜಿಲ್ಲಾಧಿಕಾರಿ ಇರುವುದರಿಂದ, ಚಿಕ್ಕೋಡಿ ಉಪವಿಭಾಗಕ್ಕೆ ಪ್ರತ್ಯೇಕ ಜಿಲ್ಲಾಧಿಕಾರಿ ಒಬ್ಬರನ್ನು ನೇಮಿಸಬೇಕೆಂದು, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಜು ಬಡಿಗೇರ ಇವರ ನೇತೃತ್ವದಲ್ಲಿ, ಸರಕಾರಕ್ಕೆ ಚಿಕ್ಕೋಡಿ ತಹಶೀಲ್ದಾರ ಚಿದಂಬರ ಕುಲಕರ್ಣಿ ಇವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು,

ಈ ಸಂಧರ್ಭದಲ್ಲಿ ಸಂಜು ಬಡಿಗೇರ ಮಾತನಾಡಿ, ಕರ್ನಾಟಕ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷರು, ಬೆಳಗಾವಿಗೆ ಬಂದಾಗ ಆಗಿನ ಜಿಲ್ಲಾಧಿಕಾರಿಗಳು, ಚಿಕ್ಕೋಡಿಗೆ ಮತ್ತೊಬ್ಬರು ಅಪರ ಜಿಲ್ಲಾಧಿಕಾರಿ ನೇಮಕವಾಗಬೇಕೆಂದು ಸಲಹೆ ನೀಡಿದ್ದಾರೆ, ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನೂ ಸಹ ಕಳುಹಿಸಿದ್ದಾರೆ, ಬೆಳಗಾವಿ ಜಿಲ್ಲೆಯ ವಿಸ್ತೀರ್ಣ13,433 ಚದರ ಕಿ. ಮಿ. ಇರುವುದರಿಂದ, ಸಂಪೂರ್ಣ ಜಿಲ್ಲೆಯನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದು .

ಒಬ್ಬ ಜಿಲ್ಲಾಧಿಕಾರಿಯವರಿಂದ ಅಸಾಧ್ಯದ ಮಾತು ಎಂದು ಹೇಳಿದರು, ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ 15 ತಾಲೂಕುಗಳು, 18 ವಿಧಾನ ಸಭಾ ಕ್ಷೇತ್ರಗಳು, 53 ಲಕ್ಷ ಜನಸಂಖ್ಯೆ ಇದೆ, ಭೌಗೋಳಿಕ ವಿಸ್ತೀರ್ಣದ ಕಾರಣದಿಂದ ಜಿಲ್ಲೆಯು ಅಭಿವೃದ್ಧಿ ಕಂಡಿಲ್ಲ, ದಕ್ಷಿಣ ಕರ್ನಾಟಕದಲ್ಲಿ ಪ್ರತಿ 100 ಕಿ.ಮಿ.ಅಂತರದಲ್ಲಿ 2 ಜಿಲ್ಲೆಗಳು ಕಾರ್ಯ ನಿರ್ವಹಿಸುತ್ತಲಿವೆ, ಬೆಳಗಾವಿ ಜಿಲ್ಲೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಬೇಕಾದರೆ ಸುಮಾರು 250 ಕಿ.ಮಿ. ಅಂತರವಿದೆ. ಬೆಳಗಾವಿ ನಗರದಿಂದ ಅಥಣಿ ತಾಲೂಕಿನ ತೇಲಸಂಗ ಮತ್ತು ಕೊಟ್ಟಲಗಿ ಸುಮಾರು180 ರಿಂದ 190 ಕಿ.ಮಿ.ಅಂತರವಿದೆ,

ಈ ಭಾಗದ ಜನರು ಜಿಲ್ಲಾ ಕೇಂದ್ರಕ್ಕೆ ಬರಲು ಹರಸಾಹಸ ಪಡುತ್ತಿದ್ದಾರೆ, ಜನರಿಗೆ ಮಾತ್ರ ತೊಂದರೆ ಆಗದೇ ಆಡಳಿತ ನಡೆಸಲು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೂ ಸಹ, ಕಾರ್ಯದ ಒತ್ತಡ ವಿಪರೀತ ಹೆಚ್ಚಾಗಿದೆ ಎಂದು ಹೇಳಿದರು, ಕೂಡಲೇ ಚಿಕ್ಕೋಡಿಗೆ ಅಪರ ಜಿಲ್ಲಾಧಿಕಾರಿಗಳ ಬದಲಾಗಿ ಪ್ರತ್ಯೇಕ ಒಬ್ಬರು ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಿ, ಆಡಳಿತ ವ್ಯವಸ್ಥೆಯ ಸುಧಾರಣೆಗೆ ಕೈ ಜೋಡಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂಧರ್ಭದಲ್ಲಿ ಸಂಜಯ ಪಾಟೀಲ, ಬಸವರಾಜ ಸಾಜನೆ, ಶ್ರೀಕಾಂತ ಅಸೋದೆ, ಅಮೋಲ ನಾವಿ, ರುದ್ರಯ್ಯಾ ಹಿರೇಮಠ, ರಣಜೀತ ಶಿಂದೆ, ಸುಲೇಮಾನ ನಾಲಬಂದ, ಖಾನಪ್ಪಾ ಬಾಡಕರ, ಸಚೀನ ದೊಡಮನಿ, ರಫೀಕ ಪಠಾಣ ಸೇರಿದಂತೆ ಹಲವಾರು ಜನ ಹೋರಾಟಗಾರರು ಉಪಸ್ಥಿತರಿದ್ದರು.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!